Thursday, September 19, 2024

ಪ್ರಾಯೋಗಿಕ ಆವೃತ್ತಿ

5 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 5 ಬಸ್ಕಿಯಷ್ಟೆ ಶಿಕ್ಷೆ!

  • 5 ವರ್ಷದ ಮಗುವನ್ನು ಅತ್ಯಾಚಾರ ಮಾಡಿದ ವ್ಯಕ್ತಿಗೆ ಬಿಹಾರ ಪಂಚಾಯತ್‌ನ ಶಿಕ್ಷೆ: 5 ಬಸ್ಕಿಯಷ್ಟೆ 
  • ವಿಡಿಯೋ ವೈರಲ್ ಆದ ನಂತರ ಎಫ್‌ಐಆರ್ ದಾಖಲು

ಬಿಹಾರದ ನವಾಡ ಜಿಲ್ಲೆಯ ಪೊಲೀಸರು ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆ ವ್ಯಕ್ತಿ ಆರೋಪಿಯಾಗಿರುವ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿಟ್-ಅಪ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

ಹದಿನಾಲ್ಕು ಸೆಕೆಂಡ್‌ಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವ್ಯಕ್ತಿ, ಅವನ ಮುಖ ಮತ್ತು ಮುಂಡವನ್ನು ಶಾಲು ಹೊದಿಸಿ, ಐದು ಸಿಟ್-ಅಪ್‌ಗಳನ್ನು ಹಾಜರಿದ್ದ ಜನಸಮುದಾಯದ ಮಧ್ಯೆ- ಸ್ಥಳೀಯ ಪಂಚಾಯತ್‌ನಿಂದ ಅವನಿಗೆ ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾವಡಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಗೌರವ್ ಮಂಗಳಾ ಅವರು ಶುಕ್ರವಾರ, “ನಾವು ಆರೋಪಿ ಅರುಣ್ ಪಂಡಿತ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧ ತಡೆಗಟ್ಟುವಿಕೆ (ಪೋಸ್ಕೋ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ.  ತನಿಖೆಯಲ್ಲಿ  ಕನೌಜ್ ಗ್ರಾಮ ಪಂಚಾಯತ್ ಸದಸ್ಯರ ಹೆಸರು ಕೇಳಿಬಂದರೆ ಅವರನ್ನೂ ತರಾಟೆಗೆ ತೆಗೆದುಕೊಳ್ಳಬಹುದಾಗಿದೆ.

ಆರೋಪಿಯು ಬಿಹಾರದ ನವಾಡದ ಅಕ್ಬರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕನೌಜ್ ಗ್ರಾಮದಲ್ಲಿ ಕೋಳಿ ಫಾರಂ ಹೊಂದಿದ್ದಾನೆ.  ಚಾಕೋಲೇಟ್ ನೀಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಜಮೀನಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹುಡುಗಿ ಮನೆಗೆ ಹಿಂದಿರುಗಿದ ನಂತರ ತನ್ನ ಚಿಕ್ಕಪ್ಪನಿಗೆ  ಕಷ್ಟವನ್ನು ವಿವರಿಸಿದಳು. ನಂತರ ಕುಟುಂಬ ಸದಸ್ಯರು ಎಫ್‌ಐಆರ್  ದಾಖಲಿಸಿದ್ದಾರೆ.

ಕುಟುಂಬವು ಪೊಲೀಸ್ ದೂರು ದಾಖಲಿಸುವ ಮೊದಲು, ಆರೋಪಿಯು ಕನೌಜ್ ಗ್ರಾಮ ಪಂಚಾಯತ್‌ನ ಮಾಜಿ ಮುಖಿಯ (ಗ್ರಾಮದ ಮುಖ್ಯಸ್ಥ) ಸಹಾಯವನ್ನು ಕೇಳಿದ್ದನು ಎಂದು ತಿಳಿದು ಬಂದಿದೆ.

ನಂತರ ಗ್ರಾಮದ ಮುಖ್ಯಸ್ಥ ಒತ್ತಾಯದ ಮೇರೆಗೆ ಪಂಚಾಯತ್‌ನ ಸಭೆಯನ್ನು ಕರೆಯಲಾಯಿತು, ಅಲ್ಲಿ ಆರೋಪಿಗೆ ಆಪಾದಿತ ಅಪರಾಧಕ್ಕೆ ಶಿಕ್ಷೆಯಾಗಿ ಐದು ಬಸ್ಕಿ ಹೊಡೆಸಿ ನಂತರ ಬಿಡಲು ಹೇಳಲಾಯಿತು. ಕುಟುಂಬಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಹೇಳುವ ಮೂಲಕ ಪೊಲೀಸರನ್ನು ಸಂಪರ್ಕಿಸದಂತೆ ಪಂಚಾಯತ್ ಸದಸ್ಯರು ಬಾಲಕಿಯ ಸಂಬಂಧಿಕರನ್ನು ಮನವೊಲಿಸಿದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!