ಮಂಡ್ಯದ ನೆಹರು ಯುವ ಕೇಂದ್ರ ಹಾಗೂ ಕರ್ನಾಟಕ ಹಿಂದಿ ಸಭಾ ಇವರ ಸಂಯುಕ್ತ ಆಶ್ರಯದಲ್ಲಿ 73ನೇ ವಷದ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಇದೇ ತಿಂಗಳ 14ನೇ ಸೆಪ್ಟಂಬರ್ 2022 ಬುಧವಾರ ಬೆಳಿಗ್ಗೆ 11-00 ಗಂಟೆಗೆ ಮಂಡ್ಯದ ಜಿಲ್ಲಾ ಪಂಚಾಯತ್ ಪಕ್ಕ ಇರುವ ಕರ್ನಾಟಕ ಹಿಂದಿ ಸಭಾದ ಮುಂಶಿ ಪ್ರೇಮ್ ಚಂದ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಿಂದಿ ಸ್ಪರ್ಧೆಗಳು ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಐ ಆರ್ ಎಸ್ ಆಧಿಕಾರಿಗಳಾದ ಶ್ರೀಮತಿ ಅಶ್ವಿನ್ ಗೌಡ ಮಾಡಲಿದ್ದಾರೆ. ಪ್ರಾಸ್ತಾವಿಕ ನುಡಿ ಶ್ರೀಮತಿ ನಿರ್ಮಲ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಡಲಿದ್ದಾರೆ. ಸನ್ಮಾನದ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ಡಾ.ಕೃಷ್ಣ ನೆರವೇರಿಸಲಿದ್ದಾರೆ.
ಶ್ರೀ ಮಹೇಂದ್ರ ಎಚ್.ಸಿ.ಕೈಗಾರಿಕೋದ್ಯಮಿ, ಬೆಂಗಳೂರು.ಶ್ರೀ ಹನುಮಂತು ಗಾಯಕ ಹಾಗೂ ಕಿರುತೆರೆ ಕಲಾವಿದರು, ಮಂಡ್ಯ.ಶ್ರೀ ಭಾಸ್ಕರ್ ಬಿ.ಮಾಲೀಕರು, ಮಹಾಲಕ್ಷ್ಮಿ ಪ್ರಿಂಟರ್ಸ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಕುಮಾರ್, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಇವರು ವಹಿಸಲಿದ್ದಾರೆ ಎಂದು ರ್ನಾಟಕ ಹಿಂದಿ ಸಭಾದ ಸಂಸ್ಥಾಪಕ ಕಾರ್ಯದರ್ಶಿಗಳಾದ ಎಸ್.ವಿನಯ್ ಕುಮಾರ್, ಜಿಲ್ಲಾ ಯುವ ಅಧಿಕಾರಿಯಾದ ನೆಹರು ಯುವ ಕೇಂದ್ರ ಕೆ.ಶ್ರೀವಾಣಿ ತಿಳಿಸಿದ್ದಾರೆ.




