Friday, September 20, 2024

ಪ್ರಾಯೋಗಿಕ ಆವೃತ್ತಿ

7ನೇ ವೇತನ ಆಯೋಗದ ವರದಿ ಜಾರಿ; ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆಯೇ ಸಿಹಿಸುದ್ದಿ!

ಕಳೆದ ಮೂರು ವರ್ಷಗಳಿಂದ ಸರಕಾರಿ ನೌಕರರ ಬೇಡಿಕೆಗಳನ್ನು ಪ್ರತಿನಿಧಿಸುವ 7ನೇ ವೇತನ ಆಯೋಗ ಜಾರಿ ಮಾಡುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರು ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಈ ಬಗ್ಗೆ ಸರಕಾರ ಮೀನಮೇಷ ಎಣೆಸುತ್ತ ಬಂದಿದ್ದು ಇದೀಗ ಒತ್ತಡ ತೀವ್ರವಾಗಿದೆ.

ನೌಕರರ ಹೆಚ್ಚಾದ ಒತ್ತಡದ ಹಿನ್ನಲೆಯಲ್ಲಿ ರಾಜ್ಯ ಸರಕಾರ 7ನೇ ವೇತನ ಆಯೋಗ ಜಾರಿ ಕುರಿತು ಗಂಭೀರ ಪ್ರಯತ್ನಕ್ಕೆ ಮುಂದಾಗಿದ್ದು, ಈ ಸಂಬಂಧ ಕಳೆದ ಜೂನ್ 20ರಂದು ನಡೆದ ಸಚಿವ ಸಂಪುಟದಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದೀಗ ಜುಲೈ 4ಕ್ಕೆ ನಡೆಯಲಿರುವ ಸಂಪುಟ ಸಭೆಯಲ್ಲಿ ಸರಕಾರಿ ನೌಕರರಿಗೆ ಸಿಹಿಸುದ್ದಿ ಖಚಿತ ಎನ್ನಲಾಗಿದೆ.

ನೌಕರರ ಮೂಲವೇತನದಲ್ಲಿ ಏರಿಕೆ

7ನೇ ವೇತನ ಆಯೋಗ ವರದಿ ಶಿಫಾರಸ್ಸುಗಳು ಯಥಾವತ್ ಜಾರಿಯಾದಲ್ಲಿ ರಾಜ್ಯ ಸರಕಾರಿ ನೌಕರರ ಮೂಲವೇತನದಲ್ಲಿ (Basic Salary) 27.5% ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಬೇಸಿಕ್ ವೇತನ 17,000 ರಿಂದ 27,000 ರೂಪಾಯಿ ವರೆಗೆ ಏರಿಕೆಯಾಗುವ ಸಂಭವವಿದೆ.

ರಾಜ್ಯಾದ್ಯಂತ ಸುಮಾರು 1.2 ಮಿಲಿಯನ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಇದರ ಪ್ರಯೋಜನ ಸಿಗಲಿದೆ. ವರದಿಯ ಬಹುತೇಕ ಶಿಫಾರಸುಗಳ ಜಾರಿಗೆ ಇದೀಗ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇದೇ ಜುಲೈ 4ಕ್ಕೆ ಅಂತಿಮ ತೀರ್ಮಾನ ಹೊರಬೀಳಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!