Friday, June 21, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಹಂಗೇರಿ ದೇಶದ ಬುಡಾಪೆಸ್ಟ್ ನಲ್ಲಿ ಇರಬಹುದೇ ?

ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಹಂಗೇರಿ ದೇಶದ ಬುಡಾಪೇಸ್ಟ ನಗರದಲ್ಲಿ ಇರಬಹುದು ಎನ್ನುವ ವಿಚಾರ ಚರ್ಚೆಯಾಗುತಿದೆ.

ಹಂಗೇರಿಯ ಕಾನೂನುಗಳು ಆಶ್ರಯ ಪಡೆಯಲು ಸರಳವಾಗಿದ್ದು, ಭಾರತದ ಕಾನೂನುಗಳು ಕಠಿಣವಾಗಿವೆ, ಭಾರತದ ಕ್ರಿಮಿನಲ್ ಕಾನೂನಿನಲ್ಲಿ ಮರಣದಂಡನೆಗೂ ಸಹ ಅವಕಾಶವಿದೆ, ಭಾರತದ ಜೈಲುಗಳು ಮನುಷ್ಯ ಜೀವಿಗಳು ವಾಸಯೋಗ್ಯವಾಗಿಲ್ಲ ಎನ್ನುವ ವಿಚಾರವನ್ನು ಹಂಗೇರಿ ದೇಶದ ಸರ್ಕಾರ ಮತ್ತು ಕೋರ್ಟಿಗೆ ಮನವರಿಕೆ ಮಾಡಿದರೆ ಬಹಳ ಸುಲಭವಾಗಿ ಹಂಗೇರಿ ಸರ್ಕಾರ ರೇವಣ್ಣ ಅವರಿಗೆ ಆಶ್ರಯವನ್ನು ನೀಡಿ ಬಿಡುತ್ತೆ ಎಂಬ ವಿಚಾರ ಚರ್ಚೆಗೆ ಬಂದಿದೆ.

ಒಂದು ವೇಳೆ ಆ ರೀತಿ ಹಂಗೇರಿ ಸರ್ಕಾರದ ಆಶ್ರಯವನ್ನು ಪಡೆದರೆ ಕರ್ನಾಟಕ ಸರ್ಕಾರ ನೇರವಾಗಿ ಹಂಗೇರಿಯಲ್ಲಿ ಕಾನೂನು ಹೋರಾಟ ಮಾಡಲು ಸಾಧ್ಯವಿಲ್ಲ ಅದನ್ನು ಕೇಂದ್ರ ಸರ್ಕಾರ ಮಾಡಬೇಕಾಗುತ್ತದೆ ಎಂಬುದು ಮತ್ತೊಂದು ಸಾಧ್ಯತೆ. ಅಲ್ಲಿಗೆ ಪ್ರಜ್ವಲ್ ರೇವಣ್ಣ ಮತ್ತೊಬ್ಬ ವಿಜಯ್ ಮಲ್ಯ, ನೀರವ್ ಚೋಕ್ಸಿ ಆಗುವ ಸಾಧ್ಯತೆ ಹೆಚ್ಚಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!