Friday, September 20, 2024

ಪ್ರಾಯೋಗಿಕ ಆವೃತ್ತಿ

ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ನಿಂಗರಾಜು ನಿಧನ


  • ನಾದ ಚಿಕಿತ್ಸೆ ಪ್ರಯೋಗ ನಡೆಸಿದ್ದ ಕಲಾವಿದ 

  • ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಯಶಸ್ವಿ ಕಾರ್ಯಕ್ರಮ

ಪಾಂಡವಪುರ ಪಟ್ಟಣದ ಹಾರೋಹಳ್ಳಿ ಗ್ರಾಮದ ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ನಿಂಗರಾಜು (40)  ನಿಧನರಾದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ನಾಲ್ಕು ದಿನ ಹಿಂದೆ ಮೈಸೂರಿನ ಕೆ. ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೆ ಅವರು ಮೃತಪಟ್ಟರು.

ಸ್ಯಾಕ್ಸೋಫೋನ್ ನುಡಿಸುವಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ನಿಂಗರಾಜು ಅವರು ನಾದ ಚಿಕಿತ್ಸೆ ಪ್ರಯೋಗ ಕೂಡ ನಡೆಸಿದ್ದರು. ಜತೆಗೆ ಕಂಸಾಳೆ ಕಲಾವಿದರಾಗಿದ್ದರು. ಈಹಿಂದೆ ಓಡಿಸ್ಸಾದಲ್ಲಿ ನಡೆದ ರಾಷ್ಟ್ರೀಯ ಸಂಗೀತ
ಸಮ್ಮೇಳನದಲ್ಲಿಯೂ ಭಾಗವಹಿಸಿದ್ದರು. ಕಳೆದ 2004ರಲ್ಲಿ ಆಸ್ಟ್ರೇಲಿಯಾ ದೇಶಕ್ಕೂ ಹೋಗಿ ತಮ್ಮ
ಪಾಂಡಿತ್ಯ ಪ್ರದರ್ಶಿಸಿದ್ದ ನಿಂಗರಾಜು ಅವರನ್ನು ಅಮೇರಿಕಾದ ಅಕ್ಕ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿಯೂ ಕೂಡ ಸ್ಯಾಕ್ಸೋಫೋನ್ ನುಡಿಸಿ ಗಮನಸೆಳೆದಿದ್ದರು.

ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದಿಂದ ನೀಡಲಾಗುವ ಪ್ರತಿಷ್ಠಿತ `ಕಾವೇರಿ ಪ್ರಶಸ್ತಿ, ಕನಕ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಗಳನ್ನು ತಮ್ಮ ಪ್ರತಿಭೆಯಿಂದ ಗಳಿಸಿಕೊಂಡಿದ್ದರು.

ಜತೆಗೆ ನಿಂಗರಾಜು ಹಲವಾರು ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ದೇಶಾದ್ಯಂತ ಪ್ರತಿಷ್ಠಿತ
ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸಿದ್ದರು. ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಮಧ್ಯಾಹ್ನ ಸ್ವಗ್ರಾಮ ಹಾರೋಹಳ್ಳಿಯಲ್ಲಿ ನೆರವೇರಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!