Thursday, September 19, 2024

ಪ್ರಾಯೋಗಿಕ ಆವೃತ್ತಿ

ಟಿ20| ಟೀಮ್ ಇಂಡಿಯಾಗೆ ನೂತನ ಕೋಚ್ :ಬಿಸಿಸಿಐ

ಬಿಸಿಸಿಐ ಟೀಮ್ ಇಂಡಿಯಾಗೆ ಮೂರು ಮಾದರಿಗಳಿಗೆ ಪ್ರತ್ಯೇಕ ಕೋಚ್ ಮತ್ತು ನಾಯಕನನ್ನು ನೇಮಿಸಲು ಮುಂದಾಗಿದೆ.

ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಟಿ20 ತಂಡ ಕಟ್ಟಲು ಯೋಜನೆ ರೂಪುಗೊಳ್ಳುತ್ತಿದೆ. ಮತ್ತೊಂದೆಡೆ ಟೆಸ್ಟ್ ಮತ್ತು ಏಕದಿನ ಮಾದರಿಗೆ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯಲಿದ್ದಾರೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್, ಟೆಸ್ಟ್ ಮತ್ತು ಏಕದಿನ ಮಾದರಿಗೆ ಸೀಮಿತಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ.

ಇದನ್ನೂ ಓದಿ: ಮಂಡ್ಯ | ಡಿ.10ಕ್ಕೆ ಮೈಷುಗರ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ : ಡಾ.ಶಿವಕುಮಾರ್

ಈ ಕುರಿತು ಬಿಸಿಸಿಐ ನ ಹಿರಿಯ ಅಧಿಕಾರಿಯೊಬ್ಬರು ಇನ್‌ಸೈಡ್ ಸ್ಪೋರ್ಟ್ಸ್ ಗೆ ಮಾಹಿತಿ ನೀಡಿದ್ದು, ಜನವರಿಯಿಂದಲೇ ಹೊಸ ಬದಲಾವಣೆ ಜಾರಿಗೆ ಬರಲಿದೆ ಎಂದು ವರದಿ ಮಾಡಿದೆ.

2023ರಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಏಕದಿನ ಪಂದ್ಯ ಮತ್ತು ಟಿ20 ಮಾದರಿಗಳಿಗೆ ಬಿಸಿಸಿಐ ಪ್ರತ್ಯೇಕ ತಂಡ ರಚಿಸುವ ಯೋಚನೆಯಲ್ಲಿದೆ. ಮುಂದಿನ ವರ್ಷದಿಂದಲೇ ಹೊಸ ಮಾದರಿ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದಲಿತರ ಹಕ್ಕು ಕಿತ್ತುಕ್ಕೊಳ್ಳುತ್ತಿರುವ ಬಿಜೆಪಿ 

ಕಳೆದ ತಿಂಗಳು ನ್ಯೂಜಿಲೆಂಡ್ ನಲ್ಲಿ ನಡೆದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಈ ಸರಣಿಯನ್ನು 1-0 ಅಂತರದಲ್ಲಿ ಭಾರತ ಗೆದ್ದಿತ್ತು. ನಾಯಕನಾಗಿ ಮೊದಲ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ ಪಾಂಡ್ಯ, ಇದೀಗ ಹೊಸ ಸವಾಲಿಕೆ ಸಜ್ಜಾಗುತ್ತಿದ್ದಾರೆ.

ಮುಂದಿನ ಟಿ20 ವಿಶ್ವಕಪ್ ಪಂದ್ಯಗಳು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ 2024ಕ್ಕೆ ನಡೆಯಲಿವೆ. ಈ ವೇಳೆಗೆ ಸಂಪೂರ್ಣವಾಗಿ ಭಾರತ ಯುವ ಪಡೆಯೊಂದನ್ನು ಕಟ್ಟುವ ಗುರಿಯನ್ನು ಹೊಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!