Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ವಯಂ ಶಿಸ್ತು ಇಲ್ಲದೆ ಯಶಸ್ಸು ಸಾಧ್ಯವಿಲ್ಲ : ನಾಗೇಂದ್ರಮೂರ್ತಿ

ವಿದ್ಯಾರ್ಥಿಗಳು ಬಾಲ್ಯದಿಂದಲೇ ಶಿಸ್ತು ರೂಢಿಸಿಕೊಳ್ಳಬೇಕು. ಸ್ವಯಂ ಶಿಸ್ತು ಇಲ್ಲದೆ ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಿಗುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು ವಿಷಯ ಪರಿವೀಕ್ಷಕ ಎಚ್.ಎಂ.ನಾಗೇಂದ್ರಮೂರ್ತಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಾಡಪ್ರಭು ಹಾಗೂ ಕಾಮಧೇನು ಲಯನ್ಸ್ ಕ್ಲಬ್ ಆಯೋಜಿಸಿದ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆಯುವ ಪ್ರೌಢಶಾಲಾ ವಿದ್ಯಾರ್ಥಿಗಳ ವಿಶೇಷ ಉಪನ್ಯಾಸ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಿ. ಆ ಸಮಯವನ್ನು ಪುಸ್ತಕ, ಪತ್ರಿಕೆ ಓದುವುದಕ್ಕೆ  ಮೀಸಲಿಡಬೇಕು. ಹಾಗೆಯೇ ಓದಿದನ್ನು ಪುನರಾರ್ವನೆ ಮಾಡಿಕೊಳ್ಳುವುದರಿಂದ ಸಾಧನೆ ಹಾಗೂ ಗುರಿ ತಲುಪಲು ಸಾಧ್ಯ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ದೈಹಿಕವಾಗಿಯೂ ಸದೃಢವಾಗುವುದರ ಜೊತೆಗೆ ಸ್ವಯಂ ಶಿಸ್ತನ್ನು ರೂಪಿಸಿಕೊಳ್ಳಬಹುದು. ಇದ್ದರಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಎಲ್ಲರೂ ಜಾಗೃತಾರಗಬೇಕು. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಗೃಹಿಕೆಯ ಪ್ರಮಾಣವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಸಲಹೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

ನಾಡಪ್ರಭು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ.ಪ್ರಕಾಶ್ ಮಾತನಾಡಿ, ನಮ್ಮ ಲಯನ್ಸ್ ಸಂಸ್ಥೆಗಳಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹತ್ತಾರು ಕಾರ‍್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ರಾಮನಗರ ಡಯಟ್ ನ ಕೆ.ಪಿ.ಬಾಬು ಉಪನ್ಯಾಸ ನೀಡಿದರು. ಮುಖ್ಯ ಶಿಕ್ಷಕರಾದ ಎಸ್.ರವಿಚಂದ್ರ, ಮಹದೇವ ಪ್ರಸಾದ್, ಸಿದ್ದರಾಜು, ಶಿಕ್ಷಣಾಶಕ್ತರಾದ ಕೆ.ಬಿ.ಮಹೇಶ್ಗೌಡ, ಕೆಂಪೇಗೌಡ, ಶಿಕ್ಷಕ ಕೃಷ್ಣೇಗೌಡ, ಕಾಮದೇನು
ಲಯನ್ಸ್ ಅಧ್ಯಕ್ಷ ಎಂ.ಸಿ.ಚಂದ್ರಶೇಖರ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!