Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳು ತೆಗೆದುಕೊಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿ : ಉಮೇಶ್

ಕಾಲೇಜಿನಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತರಗತಿಗೆ ರ್‍ಯಾಂಕ್ ಬರಲು ಪ್ರಯತ್ನಿಸಿ ಎಂದು ಡಿ ಡಿ ಪಿ ಯು ಉಮೇಶ್ ಕಿವಿಮಾತು ಹೇಳಿದರು.

ಮಂಡ್ಯದ ಕುವೆಂಪುನಗರ ಬಡಾವಣೆಯಲ್ಲಿರುವ ಆದರ್ಶ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆಯ ಉದ್ಘಾಟನೆ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕರ 2023 ರ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನೂ ಕೂಡ ವಿದ್ಯಾರ್ಥಿಯಾಗಿದ್ದಾಗ ಕಾಮರ್ಸ್ ತೆಗೆದುಕೊಂಡೆ, ನಮ್ಮ ಪ್ರಾಂಶುಪಾಲರು ಯಾರಾದರೂ ಸಬ್ಜೆಕ್ಟ್ ಚೇಂಜ್ ಮಾಡುವವರು ಇದ್ದರೆ, ಚೆಂಚಸ್ ಮಾಡಿಸಿಕೊಳ್ಳಿ ಎಂದರು. ನಾನು ತಕ್ಷಣ ಕಲಾ ವಿಭಾಗಕ್ಕೆ ಬದಲಾವಣೆ ಮಾಡಿಸಿಕೊಂಡಿದ್ದೆ. ಆಗ ನಮ್ಮ ತಂದೆಯವರು ಬುದ್ದಿ ಹೇಳಿ ಮತ್ತೆ ಕಾಮರ್ಸ್ ಕೊಡಿಸಿದರು. ನಂತರ ಅದೇ ಕಾಲೇಜಿಗೆ ಕಾಮರ್ಸ್ ನಲ್ಲಿ ಟಾಪರ್ ಆದೆ ಎಂದು ತಮ್ಮ‌ವಿದ್ಯಾರ್ಥಿ ಜೀವನದ ಹಾದಿಯನ್ನು ಮೆಲಕು ಹಾಕಿದರು.

ಆದರ್ಶ ಪಿಯು ಕಾಲೇಜಿನ ಸ್ಥಾಪಕ ಡಾ.ಮೂರ್ತಿ ಮಾತನಾಡಿ, ನಾನು ಕೂಡ ಒಬ್ಬ ಉಪನ್ಯಾಸಕ, ನನಗೆ ಶಿಕ್ಷಣ ಕಲಿಸುವುದು ತುಂಬಾ ಇಷ್ಟ, ಅದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ಒಂದು ಉಪನ್ಯಾಸ ಎಂಬುದು ಮುಂದಿನ ಪೀಳಿಗೆಗೆ ಯಾವ ರೀತಿ ನಾವು ಕಲಿಕಾ ವ್ಯವಹಾರವನ್ನು ಕಲಿಸುವುದಾಗಿದೆ. ವಿದ್ಯಾರ್ಥಿಗಳ ಜೀವನವನ್ನ ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆ ತರಲು ಉಪನ್ಯಾಸಕರು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗೇಗೌಡ, ಹನುಮಂತಯ್ಯ, ಮಲ್ಲೇಶ್, ಅಭಿಶೇಕ್, ಕಾಲೇಜಿನ ಪ್ರಾಂಶುಪಾಲರಾದ ಎಸ್.ಡಿ ದೊಡ್ಡಚಾರ್, ಜಿ ಎಂ ನಾಗೇಶ್, ಭೈರೇಶ್, ಡಿ.ನಾಗರಾಜು, ನಂಜುಂಡಸ್ವಾಮಿ, ಬಸವೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!