Friday, September 20, 2024

ಪ್ರಾಯೋಗಿಕ ಆವೃತ್ತಿ

ಕರಾಟೆ : ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಲಿ – ಅಲ್ತಾಫ್ ಪಾಷಾ

ಮಂಡ್ಯದ ಕರಾಟೆ ಪಟುಗಳು ಗಮನಹರಿಸಿ ತರಬೇತಿದಾರರು ಕಲಿಸುವ ಕರಾಟೆ ಕಲೆಯನ್ನು ಶ್ರದ್ಧೆಯಿಂದ ಕಲಿತು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಲಿ ಎ.ಕೆ.ಎಫ್ ತೀರ್ಪುಗಾರ ಅಲ್ತಾಫ್ ಪಾಷಾ ಆಶಿಸಿದರು.

ಮಂಡ್ಯ ನಗರದ ಹರ್ಡಿಕರ್ ಭವನದಲ್ಲಿ ನಡೆದ 2ನೇ ಗೋಜು-ರಿಯೋ ಕರಾಟೆ ಡೂ ಸೆಮಿನಾರ್ ಮತ್ತು ಬ್ಲಾಕ್ ಬೆಲ್ಟ್ ಡ್ಯಾನ್ ಗ್ರೇಡಿಂಗ್-2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಟ್ರೇಲಿಯದಿಂದ ಕರಾಟೆ ತರಬೇತಿದಾರರನ್ನು ಕರೆತಂದು ಮೂರು ದಿನಗಳ ಕಾಲ ತರಬೇತಿ ನೀಡುತ್ತಿರುವುದು ಪ್ರಶಂಸನೀಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವಂತೆ ಮಾಡಬೇಕು ಎಂದರು.

ನಿವೃತ್ತ ಪ್ರಾಂಶುಪಾಲ ಚಿಕ್ಕನಾಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಂಗಣದಲ್ಲಿ ಜನರು ಅಭ್ಯಾಸ ಮಾಡಿದರೆ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚು ಅಭ್ಯಾಸ ಮಾಡಿ ಗುರು ಹಿರಿಯರಿಗೆ ಗೌರವ ನೀಡುವಂತಾಗಬೇಕು, ನಿಮ್ಮ ನಡವಳಿಕೆ ಬದಲಾಗುವುದರಿಂದ ಉತ್ತಮ ವ್ಯಕ್ತಿಯಾಗಿ ಬದಲಾಗುತ್ತೀರಿ  ಎಂದರು.

ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ನ್ಯಾಷನಲ್ ಗೋಜು ಕರಾಟೆ ತರಬೇತಿದಾರ ಜಿಮ್ಮಿದುಗಾನ್, ಪ್ರಾಂಶುಪಾಲ ಮಹದೇವಸ್ವಾಮಿ, ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಕಾರ್ಯದರ್ಶಿ ಮಂಜು, ಶಿಕ್ಷಣ ಇಲಾಖೆಯ ಕುಮಾರ್, ವಿಜಯ್ ಕುಮಾರ್, ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸೋಸಲೆ ಸಿದ್ದರಾಜು, ತರಬೇತುದಾರ ವಿನಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!