Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಾ.ರಾಜ್ ಕುಮಾರ್ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶವಿರುತ್ತಿತ್ತು: ವಿ.ಆರ್.ಶೈಲಜ

ಕುಗ್ರಾಮದಲ್ಲಿ ಹುಟ್ಟಿ ಕನ್ನಡ ಚಲನ ಚಿತ್ರರಂಗದಲ್ಲಿ ಚಿರಸ್ಥಾಯಿಯಾದ ಡಾ.ರಾಜ್ ಕುಮಾರ್ ಚಿತ್ರಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶವಿರುತ್ತಿತ್ತು‌ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ರಾಜ್ ಕುಮಾರ್ ರವರ ಕೊಡುಗೆ ಕನ್ನಡ ಚಲನರಂಗಕ್ಕೆ ಅಪಾರವಾದದ್ದು.

ಕನ್ನಡ ಭಾಷೆ, ಕಲೆ,ಸಾಹಿತ್ಯ ವನ್ನು ಅಂದಿನ ಕಾಲಘಟ್ಟದಲ್ಲಿ ಬೆಳಗಿಸಿದಂತಹ ಕೀರ್ತಿ ಡಾ.ರಾಜ್ ಕುಮಾರ್ ರವರಿಗೆ ಸಲ್ಲುತ್ತದೆ. ಹಾಗಾಗಿ ಅವರ ಜೀವನದ ಹಾದಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.

ಡಾ.ರಾಜ್‌ಕುಮಾರ್ ಅವರು ನಟಿಸಿದ ಚಿತ್ರಗಳಲ್ಲಿ ಬಹಳ ಉತ್ತುಂಗಕ್ಕೇರಿಸಿದ ಚಿತ್ರ ಬಂಗಾರದ ಮನುಷ್ಯ. ಈ ಚಿತ್ರವು ರೈತನ ಜೀವನದ ಕಷ್ಟವನ್ನು ತಿಳಿಸುವುದರ ಜೊತೆಗೆ ಕೃಷಿಯಲ್ಲಿ ತೊಡಗಿ ರೈತರೂ ಸಹ ಆರ್ಥಿಕವಾಗಿ ಸದೃಢರಾಗಬಹುದು ಎಂಬ ಸಂದೇಶವನ್ನು ಸಾರುತ್ತದೆ ಎಂದರು.

ಡಾ. ರಾಜ್ ಅವರ ಚಲನ ಚಿತ್ರಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಸಮಾಜಕ್ಕೆ ಉತ್ತಮ‌ ಸಂದೇಶ ಸಾರುತ್ತಿದ್ದವು.

ಗಂಧದಗುಡಿ ಕರ್ನಾಟಕದ ವನಸಿರಿಯನ್ನು ಸಂರಕ್ಷಿಸುವ ಬಗ್ಗೆ ತಿಳಿಸಿದರೆ, ಶಬ್ದವೇದಿ ಚಿತ್ರವು ಮಾದಕ ವಸ್ತುಗಳನ್ನು ವಿರೋಧಿಸುವ ಕುರಿತು ಸಮಾಜಕ್ಕೆ ನೀತಿ ಪಾಠವನ್ನು ಹೇಳುವ ಚಿತ್ರವಾಗಿತ್ತು. ಡಾ.ರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ದೇವರ ಸ್ಥಾನ ನೀಡಿದ್ದಾರೆ ಎಂದರು.

ಡಾ.ರಾಜ್ ಕುಮಾರ್ ಅವರಿಗೆ ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ,ರಾಷ್ಟ್ರಪ್ರಶಸ್ತಿ ಅತ್ಯುತ್ತಮ ನಟ – ಫಿಲ್ಮ್‌ಫೇರ್ ಪ್ರಶಸ್ತಿ, ಅತ್ಯುತ್ತಮ ನಟ- ರಾಜ್ಯಪ್ರಶಸ್ತಿ,ನಾಡೋಜ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಹೀಗೆ ಹಲವಾರು ಅವರ ಪ್ರಶಸ್ತಿಗಳು ಬೆನ್ನತ್ತಿ ಬಂದವು. ಹೀಗೆ ನೂತನ ಕಲಾವಿದರಿಗೆ ದಾರಿದೀಪವಾದವರು ಡಾ. ರಾಜ್ ಕುಮಾರ್ ಎಂದರು.

ರಾಜ್ ಕುಮಾರ್ ರವರು ಸಿನಿಮಾ ರಂಗದ ಜೊತೆ ಜೊತೆಗೆ ಕನ್ನಡಪರ ಹೋರಾಟದಲ್ಲಿ ಭಾಗಿಯಾಗುತ್ತಿದ್ದರು. ನೆಲ,ಜಲ,ಭಾಷೆ ವಿಚಾರದಂತಹ ಹಲವು ಹೋರಾಟದಲ್ಲಿ ಭಾಗವಹಿಸಿದ್ದರು. ಅವರಂತಹ ಮೇರು ಪ್ರತಿಭೆ ಮತ್ತೊಬ್ಬರಿಲ್ಲ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಸ್ವಾಮಿಗೌಡ, ಮಿಮ್ಸ್ ಪಿ.ಆರ್.ಓ ಉಮೇಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್.ನಿರ್ಮಲ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!