Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಲಕ್ಷ ದೀಪೋತ್ಸವ

ಮಹಾ ಶಿವರಾತ್ರಿ ಪ್ರಯುಕ್ತ ನಾಗಮಂಗಲದ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಸಂಜೆ ಲಕ್ಷ ದೀಪೋತ್ಸವ ನಡೆಯಿತು.

ನಾಗಮಂಗಲ ಇತಿಹಾಸ ಪ್ರಸಿದ್ಧ ಸೌಮ್ಯಕೇಶವ ಸ್ವಾಮಿ ದೇಗುಲದ ಆವರಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ, 25ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.

ಶನಿವಾರ ಬೆಳಗ್ಗೆಯಿಂದ ಶ್ರೀ ಸೌಮ್ಯಕೇಶವ ಸ್ವಾಮಿಗೆ ವಿಶೇಷ ಅಲಂಕಾರ, ತೋಮಾಲೆ ಸೇವೆ, ಸಹಸ್ರನಾಮ ಸೇವೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅರ್ಚಕರಾದ ತೀರ್ಥನಾರಯಣರವರು ನಡೆಸಿಕೊಟ್ಟರು.

ಮಾನ್ಯ ಶಾಸಕರಾದ ಸುರೇಶ್ ಗೌಡರವರು 48 ಅಡಿ ಎತ್ತರದ ಗರುಡ ಕಂಬಕ್ಕೆ ಸರಪಣಿ ಅಳೆಯುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.

ಸಹಸ್ರಾರು ಭಕ್ತರು ದೀಪ ಹಚ್ಚುವ ಮೂಲಕ ಸೌಮ್ಯಕೇಶವನಿಗೆ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಪಟ್ಟಣ ಸೇರಿ ತಾಲೂಕಿನ ಎಲ್ಲಾ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಭಜನೆ, ಅನ್ನಸಂತರ್ಪಣೆ ನಡೆಯಿತು.

ಭುವನೇಶ್ವರ ದೇಗುಲ, ವೀರಭದ್ರೇಶ್ವರ ಸ್ವಾಮಿ, ನಗರೇಶ್ವರ ಸ್ವಾಮಿ, ಟಿ. ಬಿ. ಬಡಾವಣೆ ಮಹದೇಶ್ವರ ಸ್ವಾಮಿ. ಶನೇಶ್ವರ, ಮುನೇಶ್ವರ ದೇವಾಲಯಗಳಲ್ಲಿ ಹೋಮ ನಡೆಯಿತು.

ಶನೇಶ್ವರ ಮುನೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಲೂಕಿನ ಆದಿಚುಂಚನಗಿರಿ ಕಾಲಭೈರವೇಶ್ವರ ಸ್ವಾಮಿ ಸೇರಿದಂತೆ ಶಿವರಾತ್ರಿ ಆಚರಣೆ ನಡೆಯಿತು.

ಈ ಸಂದರ್ಭದಲ್ಲಿ ಹನಿ ನಿಖಿತಗೌಡ ಸಮಾಜ ಸೇವಕರು, ದಿವಾಕರ್, ಪಾನಿ ರವಿ, ಮಂಜು ಸಿ. ಕುಮಾರ್ ಇನ್ನು ಮುಂತಾದವರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!