Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚಿನ್ಮಯ್ – ಚಿರಂತ್ ಗೆ ಅಭಿನಂದನಾ ಸಮಾರಂಭ

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದ ಮಂಡ್ಯದ ಚಿನ್ಮಯ್ ಮತ್ತು ಚಿರಂತ್ ಗೆ ನೆಲದನಿ ಬಳಗದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಇದೇ ಫೆ.23ರ ಗುರುವಾರದಂದು ನಗರದ ಬಾಲಭವನದಲ್ಲಿ ಸಂಜೆ ‌5 ಗಂಟೆ ಹಮ್ಮಿಕೊಳ್ಳಲಾಗಿದೆ ಎಂದು ನೆಲದನಿ ಬಳಗದ ಅಧ್ಯಕ್ಷರಾದ ಲಂಕೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ: ಎಚ್.ಎಲ್. ನಾಗರಾಜುರವರು ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನೆಲದನಿ ಬಳಗದ ಪೋಷಕರಾದ ಡಾ.ರುಕ್ಮಿಣಿ ಶಂಕರೇಗೌಡ, ಡಾ.ವಿನಯ್ ಬಿ.ಎಸ್. ಮಕ್ಕಳ ತಜ್ಞರು ಮತ್ತು ಸಹಾಯಕ ಪ್ರಾಧ್ಯಾಪಕರು, ಮಿಮ್ಸ್, ಪ್ರಜಾವಾಣಿಯ ಜಿಲ್ಲಾ ವರದಿಗಾರರಾದ ಎಂ.ಎನ್.ಯೋಗೇಶ್, ವಿಜಯ ಕರ್ನಾಟಕ ಜಿಲ್ಲಾ ವರದಿಗಾರರಾದ ನವೀನ್, ಡಾ.ಸುವರ್ಣ ವಿ.ಡಿ. ಪ್ರಾಂಶುಪಾಲರು, ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ, ಮಂಡ್ಯ, ಡಾ.ಕೆಂಪಮ್ಮ ಜಿಲ್ಲಾ ಸಂಯೋಜನಾಧಿಕಾರಿಗಳು, ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ ಇವರು ಭಾಗವಹಿಸಲಿದ್ದಾರೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲದನಿ ಬಳಗದ ಪೋಷಕರಾದ ಕೋಮಲ್ ಕುಮಾರ್ ಎಸ್.ಎಸ್. ವಹಿಸಲಿದ್ದಾರೆ.

ಚಿನ್ಮಯ್ ಮತ್ತು‌ ಚಿರಂತ್  ನೆಲದನಿ ಬಳಗದ ಕಾರ್ಯದರ್ಶಿಗಳಾದ ಸಂತೆಕಸಲಗೆರೆ ಗ್ರಾಮದ ಯೋಗೇಶ್ ಮತ್ತು ಪತ್ನಿ ಚೈತ್ರಾರ ಅವಳಿ ಪುತ್ರರು

ಚಿನ್ಮಯ್‌ – ಚಿರಂತ್ ಇಬ್ಬರು ಆರು ವರ್ಷದ ಅವಳಿ ಮಕ್ಕಳಾಗಿದ್ದು, ಶಿಶು ಅಭಿವೃದ್ದಿ ಕೇಂದ್ರದಲ್ಲಿ ಓದುತ್ತಿದ್ದಾರೆ. ಇಬ್ಬರು ಮಕ್ಕಳು ‌ಕರಾಟೆ ಪಟುಗಳು ಕೂಡ. ಬಾಲ್ಯದಲ್ಲೆ ಪ್ರತಿಭೆಗಳಾಗಿರುವ ಇವರು ಕನ್ನಡ ಕಲರ್ಸ್ ಚಾನೆಲ್ ನಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ, ಬಹುಮಾನ ಪಡೆದು ಪೋಷಕರಿಗೆ ಮತ್ತು ನೆಲದನಿ ಬಳಗಕ್ಕೆ ಹೆಮ್ಮೆಯಗರಿಯನ್ನು ತಂದು ಕೊಟ್ಟಿದ್ದಾರೆ. ಬಾಲ್ಯದ ಪ್ರತಿಭೆಗಳು ಇನ್ನಷ್ಟು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನೆಲದನಿ ಬಳಗದ ಆಶಯ.

ಈ ಕಾರ್ಯಕ್ರಮಕ್ಕೆ ನೆಲದನಿ ಬಳಗದ ಎಲ್ಲಾ ಸದಸ್ಯರಿಗೆ, ಪೋಷಕರಿಗೆ ಮತ್ತು ಹಿತೈಷಿಗಳಿಗೆ ಹೃತ್ಪಪೂರ್ವಕವಾಗಿ ಸ್ವಾಗತ ಕೋರಿ,ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಿಳಿಸಿದ್ದಾರೆ.

ನೆಲದನಿ ಬಳಗದ ಬಗೆಗೆ ಒಂದಷ್ಟು :
ನೆಲದನಿ ಬಳಗವು ಮಂಡ್ಯದಲ್ಲಿ ಹಲವು ಸಾಮಾಜಿಕ ಚಟುವಟಿಕೆಗಳನ್ಮು ಮಾಡುತ್ತಾ ಕ್ರಿಯಾಶೀಲವಾಗಿರುವ ಬಳಗ. ನೆಲದನಿ ಬಳಗದ ಅಧ್ಯಕ್ಷ ಲಂಕೇಶ್, ಉಪಾಧ್ಯಕ್ಷ ಪ್ರತಾಪ್ ಮತ್ತು ಕಾರ್ಯದರ್ಶಿ ಯೋಗೇಶ್ ರವರು ವಿವಾಹದ ದಿನದಂದು ರಕ್ತದಾನ ಮಾಡಿ, ಸಸಿ ನೆಟ್ಟು, ವಿವಾಹಕ್ಕೆ ಹರಸಲು ಬಂದವರಿಗೆ ಸಸಿ ವಿತರಣೆ ಮಾಡಿ ಆದರ್ಶವಾಗಿರುವುದು ವಿಶೇಷವಾದದ್ದು. ಇಂತಹ ಚಟುವಟಿಕೆಗಳನ್ನು ಮಾಡುತ್ತಾ ಜೀವನದಲ್ಲೂ ಸಮಾಜಮುಖಿ ಮೌಲ್ಯಗಳನ್ನು ಆಳವಡಿಸಿಕೊಂಡಿರುವ ವಿಶೇಷ ಬಳಗ. ಸಮಾಜದ ಆರೋಗ್ಯದ ಸುಧಾರಣೆ ಮಾಡಲು ಇಂತಹ ಚಟುವಟಿಕೆಗಳು ಪ್ರಸ್ತುತ ಸಮಾಜದಲ್ಲಿ ಬಹಳ ಅತ್ಯಗತ್ಯವಾಗಿದೆ.

ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ,ಇತಿಹಾಸದ ಹಲವು ಮಹಾನೀಯರ ಸ್ಮರಣೆ, ಜಾಗೃತಿ ಶಿಬಿರ,ಅರೋಗ್ಯ ತಪಾಸಣ ಶಿಬಿರ, ಬೀದಿ ನಾಟಕ, ಜನಪದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಲಿದೆ.

ಮಹಿಳಾ ಪರವಾದ ಹೋರಾಟಗಳು, ರೈತ ಹೋರಾಟಗಳು, ಕೋಮು ಸಾಮರಸ್ಯದ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಕ್ರಿಯಾಶೀಲವಾಗಿ ತೊಡಗಿಕೊಂಡಿದೆ.

ಪ್ರತಿವರ್ಷ ನೆಲದನಿ ಬಳಗದ ಸದಸ್ಯರು ಮತ್ತು ಬಳಗದ ದಂಪತಿ ಸಮೇತರಾಗಿ ಹೋಗಿ ರಕ್ತದಾನ ಮಾಡುತ್ತಿರುವುದು ವಿಶೇಷ.

ಕೋವಿಡ್ ಸಂದರ್ಭದಲ್ಲಿ ಆರ್ ಟಿ ಒ ಬಳಿ ಇರುವ ಕಾಳಪ್ಪ ಬಡಾವಣೆಯ ನಿವಾಸಿಗಳ ಕುಟುಂಬಗಳನ್ನು ದತ್ತು ತೆಗೆದುಕೊಂಡು, ಅಲ್ಲಿನ ನಿವಾಸಿಗಳಿಗೆ ನೆಲದನಿ ಬಳಗವು ಹೆಗಲು ಕೊಟ್ಟು ಅವರ ಕಷ್ಟಕಾಲದಲ್ಲಿ ಭಾಗಿಯಾಗಿತ್ತು.

ಈ ತಂಡವು ಇಷ್ಟು ಕ್ರಿಯಾಶೀಲವಾಗಿ ಸಾಮಾಜಿಕ ಚಟುವಟಿಕೆಗಳನ್ನು ಕಾರ್ಯಗತಗೊಳ್ಳಿಸಲು ಸದಾ ಬೆಂಬಲವಾಗಿ ನಿಂತಿರುವ ಬಳಗದ ಸದಸ್ಯರ ಎಲ್ಲಾ ರೀತಿಯ ಸಹಕಾರ ನೆಲದನಿ ಬಳಗಕ್ಕೆ ಜೀವಜಲವೇ ಆಗಿದೆ.

ಈ ನೆಲದನಿ ತಂಡವು ತನ್ನ ಚಟುವಟಿಕೆಯ ಭಾಗವಾಗಿ ಉದಯೋನ್ಮುಖ ಪ್ರತಿಭೆಗಳಾದ ಚಿನ್ಮಯ್ ಮತ್ತು ಚಿರಂತ್ ಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದೆ.

ನೆಲದನಿ ಬಳಗವು ಇದೇ ರೀತಿ ಸಮುಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತ ಬರಲಿ ಎಂದು ನುಡಿ ಕರ್ನಾಟಕ.ಕಾಂ ಬಳಗದ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!