Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಬ್ಬೇಪಾರಿಯಾಗಿ ಅಲೆಯುತ್ತಿದ್ದ ಸಚಿವ ಸುನೀಲ್ ಕುಮಾರ್ ಈಗ 1000 ಕೋಟಿಯ ಒಡೆಯನಾಗಿದ್ದು ಹೇಗೆ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕೆಲ ವರ್ಷಗಳ ಹಿಂದೆ ಏನೂ ಇಲ್ಲದಂತಿದ್ದ ವ್ಯಕ್ತಿ. ಈಗ ಆತ ಸಾವಿರ ಕೋಟಿಯ ಒಡೆಯ ಎಂದು ಘೋಷಿಸಿಕೊಂಡಿದ್ದಾನೆ….ಇದು ಹೇಗೆ ಸಾಧ್ಯ ? ಆತ ನರೇಗಾ ಯೋಜನೆಯಲ್ಲಿ ಬೆವರು ಹರಿಸಿದ್ರಾ ? ಇಲ್ಲ ಅಡಿಕೆ ಮರ ಹತ್ತಿದ್ರಾ ? ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.

“>

ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಕರುಳುಬಳ್ಳಿಯವರೇ ಆರೋಪಿಸಿದ್ದಾರೆ. ಅಬ್ಬೇಪಾರಿಯಾಗಿ ಅಲೆಯುತ್ತಿದ್ದ ಸಚಿವ ಸುನಿಲ್ ಕುಮಾರ್ ಈಗ 1000 ಕೋಟಿಯ ಒಡೆಯನಾಗಿದ್ದು ಹೇಗೆ? ಉದ್ಯೋಗ ಖಾತ್ರಿಯಲ್ಲಿ ಬೆವರು ಹರಿಸಿದ್ರಾ, ಅಡಿಕೆ ಮರ ಹತ್ತಿದ್ರಾ? ಈ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಧೈರ್ಯವನ್ನು ಸುನಿಲ್ ಕುಮಾರ್ ಮತ್ತು ಬಿಜೆಪಿ ನಾಯಕರು ತೋರುವರೇ? ಎಂದು ಪ್ರಶ್ನಿಸಿದೆ.

ವಿಧಾನಸೌಧವು ವ್ಯಾಪಾರಸೌಧವನ್ನಾಗಿ ಮಾಡಿದ ಬಿಜೆಪಿ ಸಚಿವಾಲಯಗಳಲ್ಲಿ ಭ್ರಷ್ಟಾಚಾರದ ಮೂಲ ಬೇರುಗಳನ್ನು ಹುದುಗಿಸಿದೆ. ಸರ್ಕಾರ ನೀಡಿದ ಅಂಕಿ ಅಂಶಗಳ ಪ್ರಕಾರ ವಿವಿಧ ಸಚಿವಾಲಯಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಏರಿಕೆಯಾಗಿವೆ, ಅದರಲ್ಲೂ ಸಿಎಂ ಕೈಯ್ಯಲ್ಲಿರುವ ನಗರಾಭಿವೃದ್ಧಿ ಇಲಾಖೆಯಲ್ಲೇ ಅಧಿಕ. ಇನ್ನಾದರೂ ತಮ್ಮದು 40% ಸರ್ಕಾರ ಎಂದು ಒಪ್ಪುವರೇ? ಎಂದು ಕಾಂಗ್ರೆಸ್ ಕಾಲೆಳೆದಿದೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ