Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಆಸ್ತಿ ವಿವರ

ಶ್ರೀರಂಗಪಟ್ಟಣ ಕ್ಷೇತ್ರದ ಜಾ.ದಳ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಹೆಸರಿನಲ್ಲಿ ಸ್ವಂತ ಮನೆಯಿಲ್ಲ. ಪತ್ನಿ ಬಿ.ಎಸ್.ಗೀತಾ ಅವರಿಗೆ ತಾಲ್ಲೂಕಿನ ಬೆಳಗೊಳದ ಕುಪ್ಪೆದಡ ಗ್ರಾಮದಲ್ಲಿ 30*40 ಅಡಿ ಅಳತೆಯ ನಿವೇಶನವಿದೆ.

ರವೀಂದ್ರ ಅವರು 1.68 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಒಡೆಯರಾದರೆ, ಪತ್ನಿ 25.87ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅದರಂತೆ ರವೀಂದ್ರ ಅವರು 46.59 ಲಕ್ಷ ಚರಾಸ್ತಿ ಹಾಗೂ ಪತ್ನಿ ಗೀತಾ ಅವರು 48.81 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ರವೀಂದ್ರ ಅವರ ಬಳಿ ಟೊಯೋಟಾ ಇನೋವಾ ಕಾರಿದ್ದರೆ, ಪತ್ನಿ ಗೀತಾ ಬಳಿ ಕ್ರೆಟಾ ಕಾರಿದೆ.

ರವೀಂದ್ರ ಅವರು 10 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನ, 3 ಲಕ್ಷ ರೂ. ಮೌಲ್ಯದ 5 ಕೆ.ಜಿ. ಬೆಳ್ಳಿ ಒಡೆಯರಾದರೆ, ಇವರ ಪತ್ನಿ 20 ಲಕ್ಷ ರೂ. ಮೌಲ್ಯದ 409 ಗ್ರಾಂ ಚಿನ್ನ ಹಾಗೂ 3 ಲಕ್ಷ ರೂ. ಮೌಲ್ಯದ 5 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.

ಇನ್ನು ರವೀಂದ್ರ ಅವರು 1.5 ಕೊಟಿ ರೂ. ಸಾಲಗಾರರು. ಇವರ ಪತ್ನಿ ಗೀತಾ 70 ಲಕ್ಷ ಸಾಲ ಮಾಡಿದ್ದಾರೆ. ಈಗ ರವೀಂದ್ರ ಅವರ ಬಳಿ 2.50 ಲಕ್ಷ ರೂ. ಹಾಗೂ ಪತ್ನಿಯ ಬಳಿ 3 ಲಕ್ಷ ರೂ. ನಗದು ಇದೆ ಎಂದು ಅಫಿಡವಿಟ್ ಸಲ್ಲಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!