Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆಗೆ ದಶಕಗಳ ಇತಿಹಾಸವಿದೆ -ಕಾಂಗ್ರೆಸ್

ಕಾಂಗ್ರೆಸ್ ಅವಧಿಯಲ್ಲಿ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದ ಬಿ.ಡಿ ಜತ್ತಿಯವರನ್ನು ನಂತರ ಬಂದ ಜನತಾ ಪಕ್ಷದ ಸರ್ಕಾರದಲ್ಲಿ ಭಾಗಿಯಾಗಿದ್ದ ಅಂದಿನ ಜನಸಂಘ (ಇಂದಿನ ಬಿಜೆಪಿ) ರಾಷ್ಟ್ರಪತಿ ಹುದ್ದೆಗೇರುವುದನ್ನು ತಡೆಯಿತು. ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆಗೆ ದಶಕಗಳ ಇತಿಹಾಸವಿದೆ ಕಾಂಗ್ರೆಸ್ ಹೇಳಿದೆ.

“>

ನರೇಂದ್ರ ಮೋದಿ ಅವರು ಸುಳ್ಳುಗಳ ಮೂಲಕ ನಿರ್ಲಜ್ಜತನ ಪರಮಾವಧಿಗೆ ತಲುಪಿದ್ದಾರೆ. ಮೋದಿಯವರಿಂದಾಗಿ ಪ್ರಧಾನಿ ಹುದ್ದೆಯ ಗೌರವ, ಘನತೆ ಮೂರು ಕಾಸಿಗೆ ಹರಾಜಾಗುತ್ತಿದೆ. ಪಠ್ಯದಲ್ಲಿ ಅಂಬೇಡ್ಕರ್‌ರನ್ನು ಅವಮಾನಿಸಿ, ಸಂವಿಧಾನ ರಚಿಸಿಲ್ಲ ಎಂದಿದ್ದ ಬಿಜೆಪಿಯ ಧೂರ್ತತನದ ಬಗ್ಗೆ ಮಾತಾಡದೆ ಕಾಂಗ್ರೆಸ್ ವಿರುದ್ದ ಸುಳ್ಳು ಹೇಳಿದ್ದು ನಾಚಿಕೆಗೇಡು ಕಾಂಗ್ರೆಸ್ ತಿರುಗೇಟು ನೀಡಿದೆ.

ನರೇಂದ್ರ ಮೋದಿ ಅವರೇ, ದಲಿತ ನಾಯಕ ಡಾ.ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ನಿಮಗೆ ಮಾಹಿತಿ ಇಲ್ಲವೇ? ಶತಶತಮಾನಗಳಿಂದಲೂ ದಲಿತರ ರಕ್ತದಲ್ಲಿ ಮಿಂದೆದ್ದ ಮನುವಾದಿಗಳೇ ಇಂದು ದಲಿತ ನಾಯಕರ ರಕ್ತ ಹರಿಸಿದ್ದಾರೆ. ಲಿಂಗಾಯತರ ನಂತರ ಬಿಜೆಪಿಯ ಟಾರ್ಗೆಟ್ ದಲಿತರು ಎಂಬುದಕ್ಕೆ ಈ ಘಟನೆ ಪುಷ್ಠಿ ಕೊಡುತ್ತದೆ ಕಾಂಗ್ರೆಸ್ ಕಿಡಿಕಾರಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ