Monday, October 21, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಬಡವರ ಪರವಾದ ಕಾಂಗ್ರೆಸ್ ಪಕ್ಷ ಗೆಲ್ಲಿಸಿ – ನರೇಂದ್ರಸ್ವಾಮಿ

ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆ ನೀಡುವುದರ ಮೂಲಕ ಬಡವರ ಪರವಾಗಿ ನಿಲ್ಲುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ತಾಲ್ಲೂಕಿನ ಚೋಳನಹಳ್ಳಿಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತಾ ದಿಕ್ಕು ತಪ್ಪಿಸುತ್ತಿದ್ದಾರೆ, ಜೆಡಿಎಸ್ ಪಕ್ಷದವರು ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂದು ಹೇಳಿದ್ದವರು, ಸಾಲ ಮನ್ನಾ ಮಾಡಲಿಲ್ಲ, ಆದರೇ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಕುಟುಂಬದ ಯಜಮಾನಿಯ ಖಾತೆಗೆ ತಿಂಗಳಿಗೆ 2 ಸಾವಿರ ರೂ., ಪದವಿ ನಿರುದ್ಯೋಗಿಗಳಿಗೆ ಭತ್ಯೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ತಕ್ಷಣದಲ್ಲಿಯೇ ಜಾರಿ ಮಾಡಲಾಗುವುದು ಎಂದರು.

ನನ್ನ ಅಧಿಕಾರದ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕರ ತರಬೇತಿ ಕೇಂದ್ರ, ಸ್ತ್ರೀ ಶಕ್ತಿಭವನ, ಅಂಬೇಡ್ಕರ್ ಭವನ, ಮೀನು ಮಾರುಕಟ್ಟೆ, ಪೂರಿಗಾಲಿ ಹನಿ ನೀರಾವರಿ ಯೋಜನೆ, ಏತ ನೀರಾವರಿ ಯೋಜನೆ, ಹಲವು ವಸತಿ ಶಾಲೆಗಳು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಅಗ್ನಿ ಶಾಮಕ ದಳ, ಎಪಿಎಂಸಿ, ಕರೆ ಅಭಿವೃದ್ಧಿ, ರಸ್ತೆ ಕುಡಿಯುವ ನೀರು, ಬಡವರಿಗೆ ಮನೆಗಳು ಸೇರಿದಂತೆ ಕ್ಷೇತ್ರದ ಸರ್ವಂಗೀಣ ಅಭಿವೃದ್ದಿಗೆ ಶ್ರಮಿಸಲಾಗಿತ್ತು. ಆದರೇ ನಂತರ ಬಂದ ಶಾಸಕರು ಕ್ಷೇತ್ರಕ್ಕೆ ಒಂದು ಯೋಜನೆ, ಒಂದು ಮನೆಯನ್ನು ತರದೇ ಕಾಲಹರಣ ಮಾಡಿದ್ದಾರೆಂದು ದೂರಿದರು.

ಶಾಸಕರಾದವರು ಸರ್ಕಾರದಿಂದ ಹೊಸ ಯೋಜನೆಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಶಕ್ತಿ ಹೊಂದಿರಬೇಕು, ನಿಮ್ಮ ನರೇಂದ್ರಸ್ವಾಮಿಗೆ ಸರ್ಕಾರದಿಂದ ಯೋಜನೆಗಳನ್ನು ತಂದು ಕ್ಷೇತ್ರವನ್ನು ಮಾದರಿ ತಾಲ್ಲೂಕನ್ನಾಗಿ ಮಾಡುವ ಸಾಮಾರ್ಥ್ಯ ಹೊಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವುದರ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು.

ಸುಳ್ಳುಗಳನ್ನು ಹೇಳುತ್ತಾ ದಿಕ್ಕುತಪ್ಪಿಸುವವರ ಬಗ್ಗೆ ಎಚ್ಚರವಿರಲಿ, ಐದು ವರ್ಷದ ಅವಧಿಯಲ್ಲಿ ನಿನ್ನ ಸಾಧನೆ ಏನು ಎನ್ನುವುದನ್ನು ಶಾಸಕರಾಗಿದ್ದವರಿಗೆ ಮತದಾರರು ಪ್ರಶ್ನೆ ಮಾಡಬೇಕಿದೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕ್ಷೇತ್ರದಲ್ಲಿ ಅರಾಜಕತೆ, ಲೂಟಿ, ಲಂಚ ಸೇರಿದಂತೆ ಆಟಾಟೋಪಗಳು ಹೆಚ್ಚಾಗುತ್ತಿದೆ ಎಂದು ದೂರಿದ ಅವರು, ಕ್ಷೇತ್ರದ ನೆಮ್ಮದಿ ಹಾಗೂ ಲಂಚಮುಕ್ತ ಆಡಳಿತಕ್ಕೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಮಳವಳ್ಳಿಗೆ ಸಿದ್ದರಾಮಯ್ಯ
ಮೇ.3ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳವಳ್ಳಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದ್ಯಾಪೇಗೌಡ, ಸುಷ್ಮಾರಾಜು, ಸುಂದರೇಶ್, ಹುಸ್ಕೂರು ಕೃಷ್ಣಮೂರ್ತಿ, ಚಿಕ್ಕಣ್ಣೇಗೌಡ, ಸತೀಶ್, ನಾಗೇಶ್, ಟಿಎಂ ಪ್ರಕಾಶ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!