Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೂ.4 ; ನಾಲ್ವಡಿ ಜಯಂತಿ – ತೃತೀಯ ಕನ್ನಡ ಅಕ್ಷರ ಜಾತ್ರೆ

ಡಾ.ಜೀಶಂಪ ಸಾಹಿತ್ಯ ವೇದಿಕೆ, ಮಂಡ್ಯ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ, ಮಂಡ್ಯ, ಕನ್ನಂಬಾಡಿ, ಕಾವೇರಿಪ್ರಭ ದಿನಪತ್ರಿಕೆ, ಮಂಡ್ಯ ಇವರ ಆಶ್ರಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಜೂನ್ 4ರಂದು ಭಾನುವಾರ ನಗರದ ಗಾಂಧಿಭವನದಲ್ಲಿ ಬೆಳಗ್ಗೆ 10-30ಕ್ಕೆ ತೃತೀಯ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್. ಕೃಷ್ಣಸ್ವರ್ಣಸಂದ್ರ ತಿಳಿಸಿದರು.

ಮಂಡ್ಯದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕವಿಗಳು, ಖ್ಯಾತ ವೈದ್ಯ ಡಾ.ಕೆ.ಚಂದ್ರಶೇಖರ್ ಅವರನ್ನು ಕನ್ನಡ ಅಕ್ಷರ ಜಾತ್ರೆ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಅಕ್ಷರ ಜಾತ್ರೆ ಉದ್ಘಾಟನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜೇಗೌಡ ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಚಲನಚಿತ್ರ ಸಾಹಿತಿ ಡಾ.ನಾಗೇಂದ್ರಪ್ರಸಾದ್ ವಹಿಸುವರು. ಬೆಂಗಳೂರಿನ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ರಾಜರ್ಷಿ ಒಡೆಯರ್ ಕುರಿತು ಮಾತನಾಡುವರು. ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡುವರು ಎಂದು ವಿವರಿಸಿದರು.

ದೇ ಸಂದರ್ಭದಲ್ಲಿ ಡಾ.ಕೆ.ಚಂದ್ರಶೇಖರ್ ಅವರ ಅನುಸಂಧಾನ ಕೃತಿಯನ್ನು ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ.ಹೆಚ್.ಎಸ್.ಮುದ್ದೇಗೌಡ ಬಿಡುಗಡೆಮಾಡುವರು. ಪವನ್ ಡೆವಲಪರ್ ಎಂ.ಡಿ.ಪವನ್ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡುವರು. ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್. ಕೃಷ್ಣಸ್ವರ್ಣಸಂದ್ರ ಪ್ರಾಸ್ತಾವಿಕವಾಗಿ ಮಾತನಾಡುವರು. ಖ್ಯಾತ ಮಾನಸಿಕ, ಲೈಂಗಿಕ ಹಾಗೂ ನರರೋಗ ತಜ್ಞ ಡಾ.ಟಿ.ಎಸ್.ಸತ್ಯನಾರಾಯಣರಾವ್, ಹಿರಿಯ ಇಎನ್‌ಟಿ ವೈದ್ಯ ಡಾ.ಎಂ.ಎಸ್.ರಾಮಲಿಂಗೇಗೌಡ, ಹಿರಿಯ ಮೂಳೆ ತಜ್ಞ ಡಾ.ಎ.ಬಿ.ಪುಟ್ಟಸ್ವಾಮಿಗೌಡ, ಹಿರಿಯ ನರ ರೋಗ ತಜ್ಞ ಡಾ.ಪಿ.ಎಂ.ಸೂರ್ಯನಾರಾಯಣ ಶರ್ಮಾ, ಎಸ್.ಡಿ.ಜಯರಾಮ್ ಆಸ್ಪತ್ರೆಯ ವೈದ್ಯ, ಗಾಯಕ ಡಾ.ಮಾದೇಶ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ರಾಗಿಮುದ್ದನಹಳ್ಳಿ ನಾಗೇಶ್, ಉಮ್ಮಡಹಳ್ಳಿ ನಾಗೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!