Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಪೌರ ಕಾರ್ಮಿಕರ ಪ್ರಗತಿಗೆ ಹೋರಾಟ : ಮಹೇಶ್

ಪೌರ ಕಾರ್ಮಿಕರ ಏಳಿಗೆಗಾಗಿ ಸದಾಕಾಲ ಹೋರಾಟ ಮಾಡುತ್ತಿರುವ ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕ ಡಿ.ಆರ್. ರಾಜು ಅವರನ್ನು ಆಯೋಗದ ಅಧ್ಯ ಕ್ಷರನ್ನಾಗಿ ನೇಮಕ ಮಾಡುವಂತೆ ಮಹೇಶ್ ಮುಟ್ಟನಹಳ್ಳಿ ಒತ್ತಾಯಿಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪೌರ ಕಾರ್ಮಿಕ ನಾಯಕ ಡಿ.ಆರ್. ರಾಜು ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿ೦ದಲೂ ರಾಜು ಅವರು ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರಿ ಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟದ ಫಲದಿಂದಾಗಿ ಸರ್ಕಾರ ಸಫಾಯಿ ಕರ್ಮಚಾರಿಗಳಿಗೆ ಹಲವಾರು ಸೌಲಭ್ಯಗಳನ್ನು ನೀಡಿದೆ ಎಂದರು.

ಯಾವುದೇ ಸಂಘಟನೆಯಾಗಲೀ ಸಂಘಟಿತವಾಗಿ ಹೋರಾಟ ಮಾಡಿದಲ್ಲಿ ಸರ್ಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಾ ಗುತ್ತದೆ. ಹಾಗಾಗಿ ಒಗ್ಗಟ್ಟಿಗೆ ಜಯ ಇದೆ ಎಂಬು ದನ್ನು ನಾವೀಗಾಗಲೇ ತಿಳಿದಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಮತ್ತಷ್ಟು ಸೌಲಭ್ಯಗಳಿಗಾಗಿ ಹೋ ರಾಟ ನಡೆಸುವ ಅನಿವಾದ್ಯತೆ ಇದೆ ಎಂದು ಹೇ ಳಿದರು. ಸರ್ಕಾರದ ಮತ್ತಷ್ಟು ಸೌಲಭ್ಯಗಳನ್ನು ಪಡೆಯುವಂತಾಗಲು ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕರನ್ನೇ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ಮಾಡಬೇಕು. ಬೇರೆಯವರನ್ನು ಮಾಡಿದರೆ ಅವರಿಗೆ ಕುಳಿತು, ಈ ಬಗ್ಗೆ ಚರ್ಚಿಸಿ, ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಎಂಎಲ್‌ಸಿ ಸ್ಥಾನವನ್ನು ನೀಡಿ, ಅವರಿಗೆ ಸಚಿವ ಸ್ಥಾನವನ್ನೂ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಮುದಾಯದ ಕಷ್ಟ ಸುಖಗಳು ತಿಳಿದಿರು ವುದಿಲ್ಲ. ಹಾಗಾಗಿ ನಮಗೇ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಜಿಲ್ಲಾ ಮತ್ತು ನಗರ ಘಟಕವನ್ನು ಅಸ್ತಿ ತಕ್ಕೆ ತರಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಮಹೇಶ್‌ ಮುಟ್ಟನಹಳ್ಳಿ, ಪ್ರಧಾನ ಕಾರೈದರ್ಶಿಯಾಗಿ ಮ ಹದೇವ, ಜಿಲ್ಲಾ ಕಾರಾಧ್ಯಕ್ಷರಾಗಿ ಅರ್ಜುನ್‌, ನಗರ ಅಧ್ಯಕ್ಷರಾಗಿ ಮಹದೇವ, ಪದಾಧಿಕಾರಿಗ ಳಾಗಿ ಶಿವಕುಮಾರ್, ಗಮೇಶ ಕೆ., ಮಹೇಂದ್ರ, ನಾಗರಾಜು, ಮಹದೇವ, ಕುಮಾರ, ಶಂಕರ, `ಓಬಯ್ಯ, ಮಹದೇವ ಎಂ. ಅವರನ್ನು ನೇಮಕ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!