Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ಲಾಸಿಯಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಉದ್ಘಾಟನೆ

ಮದ್ದೂರು ತಾಲ್ಲೂಕಿನ ಹನುಮಂತನಗರದಲ್ಲಿ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ಕ್ಲಾಸಿಕ್ ಕ್ರಿಕೇಟರ್ಸ್ ವತಿಯಿಂದ ನಡೆಯುತ್ತಿರುವ ಕ್ಲಾಸಿಯಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಸಮಾಜ ಸೇವಕ‌‌ ಕದಲೂರು ಉದಯ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲರಲ್ಲೂ ಸ್ನೇಹ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಕ್ರಿಕೆಟ್‌ ಪಂದ್ಯಾವಳಿ ನಡೆಸುತ್ತಿರುವ ಕ್ಲಾಸಿಕ್ ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ.ಇಂತಹ ಕ್ರಿಕೆಟ್ ಟೂರ್ನಮೆಂಟ್ ಗಳಲ್ಲಿ ಭಾಗವಹಿಸುವ ತಂಡಗಳು ಬಹಳ ಶಿಸ್ತಿನಿಂದ ಆಟವಾಡಬೇಕು ಎಂದರು.

3 ದಿನಗಳ ಕಾಲ ಆಯೋಜಿಸಿರುವ ಕ್ಲಾಸಿಯಸ್ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸುವ ಯುವಕರಲ್ಲಿ ಸಣ್ಣಪುಟ್ಟ ಗಲಾಟೆಗಳು ಇರುತ್ತವೆ. ಜಗಳ ಬಿಟ್ಟು ಕ್ರೀಡಾ ಮನೋಭಾವದಿಂದ ಆಟವನ್ನು ಆಡಬೇಕು.ಕ್ರಿಕೆಟ್ ಆಟದಿಂದ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆ ಆಗಲಿದ್ದು,ಯುವಕರು ಕ್ರಿಕೆಟ್ ಆಡುವಂತೆ ಸಲಹೆ ನೀಡಿದರು.

ಕ್ರಿಕೆಟ್ ಟೂರ್ನಿ ಎಲ್ಲಾ ಯುವಕರನ್ನು ಒಗ್ಗೂಡಿಸುವ ಆಟ.ಸ್ನೇಹತ್ವಕ್ಕಾಗಿ ಕ್ರಿಕೆಟ್‌ ಟೂರ್ನಿ ನಡೆಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದರು.ಈ ಐಪಿಎಲ್‌ ಮಾದರಿಯಂತೆ ತುಂಬಾ ಅಚ್ಚುಕಟ್ಟಾಗಿ ಕ್ರಿಕೆಟ್‌ ಆಯೋಜನೆ ಮಾಡಿರುವುದು ಸಂತೋಷದ ವಿಚಾರ ಎಂದರು.

ಸ್ನೇಹತ್ವಕ್ಕಾಗಿ ಕ್ರಿಕೆಟ್‌ ಟೂರ್ನಿ ನಡೆಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದರು.

ಈ ಸಂದರ್ಭದಲ್ಲಿ ಸಿಪಾಯಿ ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯ ಕದಲೂರು ತಿಮ್ಮೇಗೌಡ, ಯತೀಶ್,ಅಣ್ಣೂರು ಮನು ಕರಡಕೆರೆ ಮನು,ಅಣ್ಣೂರು ಹರೀಶ್, ಚಿದಂಬರ,ಮಣಿಗೆರೆ ರಾಮಚಂದ್ರ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!