Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ರೀಡಾ ಸಾಧನೆ ಗುರಿಯೊಂದಿಗೆ ಗುರು ಅತ್ಯವಶ್ಯಕ- ಪುನೀತ್‌ ನಂದಕುಮಾರ್

ಕ್ರೀಡಾ ಸಾಧನೆಗೆ ಪರಿಶ್ರಮದೊಂದಿಗೆ ಗುರಿ ಮತ್ತು ಗುರುವಿನ ಮಾರ್ಗದರ್ಶನ ಅತ್ಯವಶ್ಯಕ ಎಂದು ಅಂತರಾಷ್ಟ್ರೀಯ ಪ್ಯಾರಾ ಈಜುಪಟು ಪುನೀತ್‌ ನಂದಕುಮಾರ್ ಹೇಳಿದರು.

ಮಂಡ್ಯ ನಗರದ ಪಿಇಟಿ ಈಜುಕೇಂದ್ರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಟಿ ಈಜು ಕೇಂದ್ರ ಆಯೋಜಿಸಿದ್ದ ರಾಜ್ಯಮಟ್ಟದ ಪಿಇಟಿ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಜು ಸ್ಪರ್ಧೆಯು ಅತ್ಯುತ್ತಮವಾದ ಕ್ರೀಡಾ ಕ್ಷೇತ್ರವಾಗಿದೆ, ಉತ್ತಮ ತರಬೇತಿ ಮತ್ತು ಸಾಧನೆ ಮಾಡುವ ಗುರಿಯೊಂದಿಗೆ ಶ್ರಮಪಟ್ಟರೆ ಯಶಸ್ಸು ಸಾಧ್ಯವಿದೆ, ತಂದೆತಾಯಿಗಳ ಪ್ರೋತ್ರಹ ತುಂಬ ಮಹತ್ವ ನೀಡುತ್ತದೆ ಎಂದು ನುಡಿದರು.

nudikarnataka.com

ನನ್ನ ಈಜು ಕ್ರೀಡಾಸಾಧನೆಗೆ ನನ್ನ ತಂದೆ ತಾಯಿ ಪ್ರೋತ್ಸಾಹ ಮತ್ತು ಗುರುಗಳ ತರಬೇತಿಯ ಮಾರ್ಗದರ್ಶನ ಶಕ್ತಿಯಾಗಿ ಪ್ರೇರಣೆಯಾಯಿತು, ಪರಿಶ್ರಮ ಪಟ್ಟೆ, ಸೋತೆ, ಗೆದ್ದೆ, ಕ್ರೀಡಾ ಮನೋಭಾವದಿಂದ ಸಾಧನೆ ಮಾಡುವ ಹಂಬಲ ಹೆಚ್ಚಾಗಿ ಶತತ ಪ್ರಯತ್ನದಿಂದ ರಾಷ್ಟ್ರ- ಅಂತರಾಷ್ಟೀಯ ಈಜು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಯಶಸ್ಸು ಕಂಡೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ ಆನಂದ್ ಮಾತನಾಡಿ, ಮನಸ್ಸಿಟ್ಟು ಯಾವುದೇ ಕಾರ್ಯ ಮಾಡಿದರೂ ಯಶಸ್ಸು ಸಾಧ್ಯವಾಗುತ್ತದೆ, ಪೋಷಕರು ತಮ್ಮ ಮಕ್ಕಳಿಗೆ ಮನಸ್ಸಿಟ್ಟು ಕಾರ್ಯಸಾಧನೆಗೆ ಪ್ರೇರಣೆ ನೀಡಿ, ಪಿಇಟಿ ಈಜುಕೇಂದ್ರದಲ್ಲಿ ಸ್ಪರ್ಧೆಗಳು ಯಶಸ್ಸಿಯಾಗಿ ನಡೆಯಲಿ, ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿವಿಧ ವಯೋಮಾನದ ಈಜು ಸ್ಪರ್ಧಾರ್ಥಿಗಳು ನೊಂದಣಿ ಮಾಡಿಕೊಂಡು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ರಾಜ್ಯ -ರಾಷ್ಟ್ರ ಮಟ್ಟದ ಈಜು ಕ್ರೀಡಾ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಇಟಿ ಉಪಾಧ್ಯಕ್ಷ ಬಸವಯ್ಯ, ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ, ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ, ಈಜುಕೇಂದ್ರದ ಆಡಳಿತಾಧಿಕಾರಿ  ಡಾ.ಚಂದ್ರಶೇಖರ್, ಕ್ರೀಡಾಸಮುಚ್ಚ ವ್ಯವಸ್ಥಾಪಕ ಕಾರ್ತಿಕ್, ತರಬೇತಿದಾರ ಗಿರೀಶ್‌ಕುಮಾರ್, ಧರ್ಮದರ್ಶಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!