Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಫಾಕ್ಸ್ ಕಾನ್‌‌ ಸಂಸ್ಥೆಗೆ ನಕಲಿ ಪತ್ರ : ಪ್ರಕರಣ ದಾಖಲು

ಆಪಲ್ ಏರ್‌ಪಾಡ್ಸ್ ಉತ್ಪಾದನಾ ಪಾಲುದಾರರಲ್ಲಿ ಒಂದಾದ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್‌ನ ಅಧ್ಯಕ್ಷರಿಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವೊಂದು ವೈರಲ್‌ ಆಗಿದ್ದು, ಪತ್ರದಲ್ಲಿ ಆಪಲ್ ಏರ್‌ಪಾಡ್ಸ್ ಉತ್ಪಾದನಾ ಘಟಕವನ್ನು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಆಗ್ರಹಿಸಲಾಗಿದೆ.

ಪತ್ರ ವೈರಲ್ ಆದ ಕೂಡಲೇ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಪಕ್ಷವು ಎಕ್ಸ್‌ನಲ್ಲಿ ಕರ್ನಾಟಕ ಸರ್ಕಾರ ಹೈದರಾಬಾದ್ ವಿರುದ್ಧ ದೊಡ್ಡ ಪಿತೂರಿ ಮಾಡಿದೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ಡಿಕೆ ಶಿವಕುಮಾರ್ ಅವರು ನಿರಾಕರಿಸಿದ್ದರು.

ಈ ಬಗ್ಗೆ ಡಿಸಿಎಂ ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಎಂಎನ್ ಅವರು ಶನಿವಾರ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ರದ ಮೇಲಿನ ಸಹಿ ನಕಲಿಯಾಗಿದ್ದು, ಬರೆದಿರುವ ಲೆಟರ್ ಹೆಡ್ ಕೂಡ ನಕಲಿ ಎಂದು ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

“>

ಆಪಲ್ ಏರ್‌ಪಾಡ್ಸ್ ಉತ್ಪಾದನಾ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಸೆ.25ರಂದು ನಕಲಿ ಪತ್ರವು ಫಾಕ್ಸ್‌ಕಾನ್ ಅಧ್ಯಕ್ಷರಿಗೆ ಡಿಕೆ ಶಿವಕುಮಾರ್‌ ಹೆಸರಿನಲ್ಲಿ ಬರೆಯಲಾಗಿತ್ತು.

ಪತ್ರದಲ್ಲಿ ನೀವು ಹೈದರಾಬಾದ್‌ನಲ್ಲಿ ಸ್ಥಾಪಿಸಲು ಯೋಜಿಸಿರುವ ಆಪಲ್ ಏರ್‌ಪಾಡ್ಸ್ ಉದ್ಯಮವನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಮ್ಮ ಸರ್ಕಾರದ ಪರವಾಗಿ ಆಗ್ರಹಿಸುತ್ತೇನೆ. ಈ ಕ್ರಮದಿಂದ ಹಲವಾರು ಪರಸ್ಪರ ಪ್ರಯೋಜನಗಳು ಇರಲಿದೆ. ಬೆಂಗಳೂರಿನಲ್ಲಿ ಇರುವುದರಿಂದ ನಿಮ್ಮ ಅಂತರಾಷ್ಟ್ರೀಯ ಮನ್ನಣೆಯೂ ಹೆಚ್ಚಳವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು.

ಇದಲ್ಲದೆ ಹೈದರಾಬಾದ್‌ಗೆ ಹೋಲಿಸಿದರೆ ಬೆಂಗಳೂರು ತನ್ನ ಸುರಕ್ಷತೆಗೆ ಹೆಸರುವಾಸಿಯಾಗಿದೆ ಮತ್ತು 50 ವರ್ಷಗಳ ಇತಿಹಾಸವನ್ನು ಹೊಂದಿರುವ  ಐಟಿ ಉದ್ಯಮವನ್ನು ಹೊಂದಿದೆ. ನಗರವು ಉನ್ನತ ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ಹೊಂದಿದೆ. ವಿಶೇಷವಾಗಿ ಹೈದರಾಬಾದ್‌ನಲ್ಲಿನ ಹಿಂದಿನ ಕೋಮು ಗಲಭೆಗಳ ಘಟನೆಗಳನ್ನು ನೋಡಿದಾಗ ಇದು ನಿಮ್ಮ ವ್ಯವಹಾರಕ್ಕೆ ಅಪಾಯವನ್ನುಂಟುಮಾಡುತ್ತದೆ. ಇದಲ್ಲದೆ ಹೈದರಾಬಾದ್‌ನಲ್ಲಿರುವ ಹಲವಾರು ಅಂತರಾಷ್ಟ್ರೀಯ ಕೈಗಾರಿಕೆಗಳು ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಬಿಆರ್‌ಎಸ್ ಪಕ್ಷವು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಹೈದರಾಬಾದ್ ವಿರುದ್ಧ ದೊಡ್ಡ ಸಂಚು ರೂಪಿಸಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳನ್ನು ಹೈದರಾಬಾದ್‌ನಿಂದ ಕರ್ನಾಟಕಕ್ಕೆ ಸ್ಥಳಾಂತರಿಸಲು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೊಡ್ಡ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದೆ.

ಈ ಕುರಿತು ಕುಮಾರಕೃಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಪತ್ರ ನಕಲಿಯಾಗಿದೆ ಎಂದು ಹೇಳಿದ್ದಾರೆ. ನನ್ನ ಲೆಟರ್ ಹೆಡ್ ವಿನ್ಯಾಸ, ಬಣ್ಣ ಬೇರೆ ಇದೆ. ನನ್ನ ಲೆಟರ್ ಹೆಡ್ ಪ್ರತಿ ಪುಟಕ್ಕೆ ಸಂಖ್ಯೆಗಳಿರುತ್ತವೆ. ನನ್ನ ಲೆಟರ್ ಹೆಡ್ ಹಸಿರು ಬಣ್ಣದಲ್ಲಿ ಇಲ್ಲ. 15 ವರ್ಷಗಳ ಹಿಂದೆ ಶಾಸಕರುಗಳು ಹಸಿರು ಬಣ್ಣದ ಲೆಟರ್ ಹೆಡ್ ಬಳಸುತ್ತಿದ್ದರು. ಈಗ ಆ ಬಣ್ಣದ ಲೆಟರ್ ಹೆಡ್‌ನ್ನು ಯಾರೂ ಬಳಸುವುದಿಲ್ಲ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!