Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟ: ಸಾವಯವ ಕೃಷಿಕರಿಂದ ಸರದಿ ಉಪವಾಸ

ಕಾವೇರಿ ಅನ್ಯಾಯ ಖಂಡಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಹೋರಾಟ 101ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಸರದಿ ಉಪವಾಸದಲ್ಲಿ ಮಳವಳ್ಳಿ ತಾಲೂಕು ಸಂಪೂರ್ಣ ಸಾವಯವ ಕೃಷಿಕರ ಸಂಘದ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿದರು.

ಮಂಡ್ಯದ ನಗರದಲ್ಲಿ ನಡೆಯುತ್ತಿರುವ ಸರದಿ ಉಪವಾಸಕ್ಕೆ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್ ಮಹೇಶ್ ಕುಮಾರ್, ಕಾರ್ಯದರ್ಶಿ ಮಳವಳ್ಳಿ ಚಿಕ್ಕಣ್ಣ, ಕ್ಯಾತನಹಳ್ಳಿ ಮಹದೇವಯ್ಯ, ವಡ್ಡರಹಳ್ಳಿ ಶಿವಕುಮಾರ್, ಬೆಳಕವಾಡಿ ಸಿಂಧು, ಹಂಚಿಪುರದ ಹೆಚ್.ವಿ ನಾಗರಾಜ್, ಹನುಮನಾಳು ಅಜಿತ್, ಹುಲ್ಲೆಗಾಲದ ಎಚ್.ಕೆ ವಿನಯ್ ಭಾಗವಹಿಸಿದ್ದರು.

ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ ನೀರು ಹರಿಸುತ್ತಿರುವುದನ್ನು ಸ್ಥಗಿತ ಮಾಡಬೇಕು, ಸದನದಲ್ಲಿ ಸಮಗ್ರ ಚರ್ಚೆ ನಡೆಸಿ ಸರ್ಕಾರದ ನಿಲುವು ಘೋಷಿಸಬೇಕು, ಮೇಕೆದಾಟು ಯೋಜನೆ ಜಾರಿಗೊಳಿಸಬೇಕು,ಕೇಂದ್ರ ಸರ್ಕಾರ ರಾಷ್ಟ್ರೀಯ ಜಲನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ,ರೈತ ಸಂಘದ ಇಂಡು ವಾಳು ಚಂದ್ರಶೇಖರ್,ಮುದ್ದೇಗೌಡ, ಕೀಳಘಟ್ಟ ನಂಜುಂಡೇಗೌಡ, ಕನ್ನಡ ಸೇನೆ ಮಂಜುನಾಥ್, ಡಾ. ಚಂದ್ರಶೇಖರ್,ಡಾ.ಬಿ ಕೆ ಸುರೇಶ್, ದಸಂಸ ಎಂ ವಿ ಕೃಷ್ಣ, ಸುಜಾತ ಸಿದ್ದಯ್ಯ, ಸುಶೀಲಮ್ಮ, ಕರಿಯಪ್ಪ, ಕೆ ಆರ್ ಪುಟ್ಟಸ್ವಾಮಿ ನೇತೃತ್ವ ವಹಿಸಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!