Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳೆಗೆ ಉರುಳಿದ 270 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು

ಪಾಂಡವಪುರ ತಾಲ್ಲೂಕಿನಾದ್ಯಂತ ಬಿದ್ದ ಗುಡುಗು,ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ 270ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ‌ ಬಿದ್ದು,ಸಣ್ಣಪುಟ್ಟ ಅನಾಹುತ ಸಂಭವಿಸಿದೆ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರ ಹೆಚ್.ಎಸ್.ರಘು ತಿಳಿಸಿದರು.

ಪಾಂಡವಪುರ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕಾರ್ಯನಿರ್ವಾಹಕ ಸಹಾಯಕ ಇಂಜಿನಿಯರ್ ಕಚೇರಿ ಆವರಣದಲ್ಲಿ ಸೆಸ್ಕ್ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದ ತಕ್ಷಣದಲ್ಲಿ ನಮ್ಮ ಸಿಬ್ಬಂದಿ ವರ್ಗದಿಂದ ಸರಿಪಡಿಸಿ, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪಾಂಡವಪುರ ತಾಲ್ಲೂಕಿನ ವಿದ್ಯುತ್ ಸಂಪರ್ಕ ಹಾಗೂ ವಿದ್ಯುತ್ ಕುಂದು ಕೊರತೆ ಕುರಿತು ಕೆಲಕಾಲ ರೈತರು ಹಾಗೂ ಸಾರ್ವಜನಿಕರು ಚರ್ಚೆ ನಡೆಸಿದರು.

ರೈತರು ಹೇಳಿದ್ದ ವಿದ್ಯುತ್ ಸಮಸ್ಯೆ ಕುರಿತು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಎಸ್.ರಘು ಹಾಗೂ ಎಇಇ ಪುಟ್ಟಸ್ವಾಮಿ ಅವರು ಸಂಕ್ಷಿಪ್ತವಾಗಿ ಬರೆದುಕೊಂಡು, ಸೆಸ್ಕ್ ಸಿಬ್ಬಂದಿ ವತಿಯಿಂದ ತಕ್ಷಣದಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಸರಿಪಡಿಸುವಂತೆ ಸಿಬ್ಬಂದಿ ವರ್ಗಕ್ಕೆ ಸೂಚಿಸಿದರು. ಸಭೆಯಲ್ಲಿ ಸೆಸ್ಕ್ ಇಂಜಿನಿಯರ್, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!