Wednesday, October 23, 2024

ಪ್ರಾಯೋಗಿಕ ಆವೃತ್ತಿ

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯ: ಸಚ್ಚಿದಾನಂದ

ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೇವೆ ಮಾಡಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ಅವರ ಸೇವೆ ಗುರುತಿಸಿ ಸರ್ಕಾರ ಸೂಕ್ತ ಸವಲತ್ತು ಒದಗಿಸಬೇಕೆಂದು ಯುವಮುಖಂಡ ಇಂಡುವಾಳು ಸಚ್ಚಿದಾನಂದ ಒತ್ತಾಯಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿಂದು ಶ್ರೀ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಕಾಲದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸಿದ್ದಾರೆ.ತಮ್ಮ ಪ್ರಾಣ ಲೆಕ್ಕಿಸದೆ ಕೊರೋನ ರೋಗಿಗಳ ಸೇವೆ ಮಾಡಿದ್ದಾರೆ.ತಮ್ಮ ಕುಟುಂಬದ ಸದಸ್ಯರಿಗೆ ಕೊರೊನಾ ಬಂದಿದೆ ಎಂಬಂತೆ ನೋಡಿಕೊಂಡಿರುವ ಇವರ ಸೇವೆ ಅನನ್ಯವಾದುದು ಎಂದರು.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ವೇತನ ಮತ್ತು ಭತ್ಯೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ನಾನು ಕೂಡ ಸಂಸದೆ ಸುಮಲತಾ ರವರ ಜೊತೆಗೂಡಿ ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮನೆ ಮನೆಗೂ 25ಲೀ.ಕುಡಿಯುವ ನೀರಿನ ಕ್ಯಾನ್ ವಿತರಿಸಲಾಯಿತು. ಬಳಿಕ ಇತ್ತೀಚೆಗೆ ಗ್ರಾಮದಲ್ಲಿ ಮರಣ ಹೊಂದಿದ ಐವರು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರು, ಪೌರಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ಇಂಡುವಾಳು ಸಚ್ಚಿದಾನಂದ ಸಮವಸ್ತ್ರ ವಿತರಿಸಿದರು.

ಈ ಸಂಧರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಶ್ರೀಧರ್, ವಿಎಸ್ಎಸ್‌ಎಸ್ಎನ್ ಅಧ್ಯಕ್ಷ ಪುಟ್ಟರಾಜು, ಗ್ರಾ.ಪಂ ಸದಸ್ಯರಾದ ಶಶಿಧರ್, ನಂಜುಂಡಸ್ವಾಮಿ, ಮುಖಂಡರಾದ ಪ್ರಸನ್ನ ಕುಮಾರ್, ವಿನಯ್, ಲೋಹಿತ್, ನಾಗರಾಜು, ಸಚ್ಚಿನ್ , ಬಿಜೆಪಿ ಮುಖಂಡರಾದ ರಾಮಚಂದ್ರು, ಕೆಡಿಪಿ ಸದಸ್ಯರಾದ ಸಿದ್ದಪ್ಪ, ರವಿ, ತರೀಪುರ ರವಿ, ಚಿಕ್ಕಂಕನಹಳ್ಳಿ ಆನಂದ್, ಚೆಲುವರಾಜು, ಅಂಜನಿಪುತ್ರ ಯುವಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!