Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಪಂಚಕ್ಕೆ ಬುದ್ದ, ಬಸವ, ಅಂಬೇಡ್ಕರ್ ಸಿದ್ದಾಂತಗಳು ಪ್ರಸ್ತುತ- ನಟ ಚೇತನ್

ಪ್ರಪಂಚಕ್ಕೆ ಬುದ್ದ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ನಾಲ್ವಡಿ, ಕುವೆಂಪು ಅವರ ಸಿದ್ದಾಂತಗಳು, ಸಂದೇಶಗಳು ಬೇಕಾಗಿವೆ, ಅವರ ವಿಚಾರಧಾರೆಗಳಲ್ಲಿ ಜನರು ಸಾಗಬೇಕಿದೆ, ಸಮಸಮಾಜ ನಿರ್ಮಾಣವಾಗಬೇಕಿದೆ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಸಮಾನತೆ ಕಾಣಬೇಕಿದೆ ಎಂದು ಚಿತ್ರನಟ ಚೇತನ್ ಅಹಿಂಸಾ ಹೇಳಿದರು.

ಮಂಡ್ಯನಗರದ ಪೇಟೆಬೀದಿ ಬಡಾವಣೆಯಲ್ಲಿನ ಕೃಷ್ಣ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಮಹಾನಾಯಕ ಭೀಮ್‌ರಾವ್ ಪೌಂಡೇಷನ್ ಜಿಲ್ಲಾ ಶಾಖೆ ಆಯೋಜಿಸಿದ್ದ ಎಂಬಿಆರ್‌ಎಫ್ ನೀಟ್ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇವತ್ತಿನ ದಿನಗಳಲ್ಲಿ ಸಮಸಮಾಜ ಕಟ್ಟಬೇಕು ಅಂದ್ರೆ ಮಾದರಿಗಳು ಬಹಳಮುಖ್ಯ, ಮಾದರಿಗಳು ಸಿನಿಮಾ ಸ್ಟಾರ್‌ಗಳಲ್ಲ, ಕ್ರಿಕೆಟ್ ಆಟಗಾರರಲ್ಲ, ಶ್ರೀಮಂತ ಉದ್ಯಮಿಗಳಲ್ಲ, ರಾಜಕಾರಣಿಯಲ್ಲ, ವೈಯಕ್ತಿಕ ಲಾಭಗಿಂತ ಸಮಾಜದ ಬೆಳೆವಣಿಗೆಗೆ ಯಾರು ಶ್ರಮಿಸುತ್ತಾರೆ, ಅಂತವರು ಮಾದರಿಯಾಗುತ್ತಾರೆ ಎಂದರು.

ಇತಿಹಾಸಲ್ಲಿರುವ ತಪ್ಪುಗಳನ್ನು ತಿದ್ದಬೇಕು, ವೈಜ್ಞಾನಿಕವಾಗಿ ಇತಿಹಾಸವನ್ನು ನೋಡಬೇಕು, ಆದಿವಾಸಿಗಳಿಗೆ, ಬಡವರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಎಲ್ಲಾಸೌಲಭ್ಯಗಳು ಸಿಗಬೇಕಿವೆ, ಆದರೆ ಶ್ರೀಮಂತರೇ ಶ್ರೀಮಂತರಾಗುತ್ತಿದ್ದಾರೆ, ಮಕ್ಕಳು ಮೊಮ್ಮಕ್ಕಳೇ ಬೆಳೆಯುತ್ತಿದ್ದಾರೆ, ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ನ್ಯಾಯವ್ಯವಸ್ಥೆಯಲ್ಲಿ ಸರಿಪಡಿಸಬೇಕು ಎಂದು ನುಡಿದರು.

ಚಾಮರಾಜನಗರದ ನಳಂದ ವಿಶ್ವವಿದ್ಯಾಲಯ ಮುಖ್ಯಸ್ಥ ಬಂತೆ ಭೋದಿದತ್ತ ಭಂತೇಜಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿನ ಜನತೆ ಮತ್ತು ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವದೆಡೆಗೆ ಸಾಗಬೇಕಿದೆ, ಜಗತ್ತಿಗೆ ಭಗವಾನ್‌ಬುದ್ದರು ನೀಡಿದ ಸಂದೇಶ ಮತ್ತು ಭೋಧಿ ಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ವೈಜ್ಞಾನಿಕ ಮನೋಭಾವದೆಡೆಗೆ ಸಾಗುವಂತೆ ಮಾಡುತ್ತವೆ, ಅಂದಿನ ಕಾಲದಲ್ಲೇ ಬುದ್ದರು ಹೇಳಿದ ಸಂದೇಶಗಳು, ಉಪದೇಶಗಳು, ವಿಜ್ಞಾನಲೋಕಕ್ಕೆ ಮತ್ತು ಸಂಶೋಧನೆಯಗೆ ಸಹಕಾರಿಯಾಗಿವೆ, ಸಾಕಷ್ಟು ವಿಚಾರಗಳು ಬೌತವಿಜ್ಞಾನಕ್ಕೆ ತಾಳೆಯಾಗುತ್ತಿವೆ ಎಂದು ನುಡಿದರು.

ಜಾತಿಯಿಂದ ಅಶ್ಪೃಷ್ಯತೆ ಬಂದಿಲ್ಲ ಗುಣದಿಂದ ಬಂದಿದೆ, ನಿಮ್ಮ ನಂಬಿಕೆಗಳು ಯಾವುದೇ ಇರಲಿ, ಮೌಢ್ಯತೆಯಿಂದ ಹೊರ ಬಂದು ಮನೋವಿಕಾಶಕ್ಕೆ ಅವಕಾಶ ಪಡೆದುಕೊಳ್ಳಿ, ಪ್ರಪಂಚದಲ್ಲಿರುವ ಪ್ರಕೃತಿಯ ನಿಯಮಗಳು ಸೃಷ್ಠಿಯನ್ನು ಮಾಡುತ್ತಿವೆ, ನಾಶವನ್ನೂ ಮಾಡುತ್ತಿವೆ, ಪ್ರಪಂಚವು ಕುಗ್ಗುತ್ತದೆ, ಹಿಗ್ಗುತ್ತದೆ ಎನ್ನುವುದು ಸತ್ಯ ಎಂದು ತಿಳಿಸಿದರು.

ಇಲ್ಲಿ ನೀಟ್ ತರಬೇತಿ ಪಡೆಯುವ 10 ಮಂದಿ ವಿದ್ಯಾರ್ಥಿಗಳ ವೆಚ್ಚವನ್ನು ವಾರ್ಷಿಕವಾಗಿ ನಳಂದ ವಿಶ್ವವಿದ್ಯಾಯಲ ಭರಿಸುತ್ತದೆ, ನೀವೇ ಆ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳಿ, ಆಕಾಡೆಮಿ ಉತ್ತಮವಾಗಿ ಬೆಳೆಯಲಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಎ.ಎಚ್.ಸಾಗರ್, ಮಹಾನಾಯಕ ಭೀಮ್‌ರಾವ್ ಪೌಂಡೇಷನ್ ರಾಜ್ಯಾಧ್ಯಕ್ಷ ಡಾ.ಜಿ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಚಂದ್ರಲಿಂಗು, ರಾಜ್ಯ ಕಾರ್ಯದರ್ಶಿ ಸಿ.ಚೌಡಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಲುವಯ್ಯ, ಕಸಾಪ ನಗರಾಧ್ಯಕ್ಷೆ ಸುಜಾತಕೃಷ್ಣ, ಚಂದ್ರಶೇಖರಯ್ಯ, ಸೀತಾರಾಮು, ಡಾ.ಶ್ರೀನಿವಾಸ್‌ಮೂರ್ತಿ, ವಿಶ್ವನಾಥ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!