Friday, September 20, 2024

ಪ್ರಾಯೋಗಿಕ ಆವೃತ್ತಿ

ಪೌರಕಾರ್ಮಿಕರಿಂದ ಸ್ವಾತಂತ್ರೋತ್ಸವದ ಧ್ವಜಾರೋಹಣ ಮಾಡಿಸಲಿ: ಶಿವಣ್ಣ

‘ಕೆಲಸದ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸಲು ಶ್ರಮಿಸುವ ಪೌರ ಕಾರ್ಮಿಕರ ಕೈಯಿಂದ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿಸಲು ಸರ್ಕಾರ ಮುಂದಾಗಬೇಕು’ ಎಂದು ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್. ಶಿವಣ್ಣ ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಬಸವಲಿಂಗಪ್ಪ ನಗರದಲ್ಲಿ ಲೋಹಿಯಾ ವಿಚಾರ ವೇದಿಕೆ ವತಿಯಿಂದ 100ಕ್ಕೂ ಪೌರಕಾರ್ಮಿಕರಿಗೆ ಎರಡನೇ ವರ್ಷದ ಎಲ್‌ಐಸಿ ಬಾಂಡ್‌ನ ಪ್ರೀಮಿಯಂ ವಿತರಿಸಿ ಅವರು ಮಾತನಾಡಿದರು.

‘ಪೌರಕಾರ್ಮಿಕರು ಸ್ವಚ್ಛತೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಸರ್ಕಾರ ತಲಾ ₹10 ಲಕ್ಷ ವೆಚ್ಚದ ಎಲ್‌ಐಸಿ ಬಾಂಡ್ ವಿತರಣೆಗೆ ಮುಂದಾಗಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ದೇವರನ್ನು ಪೂಜಿಸುವುದರಿಂದ ಪುಣ್ಯ ಸಿಗುವುದಿಲ್ಲ, ನಿಜವಾದ ದೇವರನ್ನು ಪೌರಕಾರ್ಮಿಕರಲ್ಲಿ ಕಾಣಬಹುದು. ಸರ್ಕಾರಿ ಕೆಲಸಗಳು ಹಾಗೂ ಪೌರಕಾರ್ಮಿಕರಿಗೆ ನೀಡಲು ರಾಜಕೀಯದಲ್ಲಿ ಮೀಸಲಾತಿ ಮುಂದಾಗುವ ನಿಟ್ಟಿನಲ್ಲಿ ಅಳುವ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು’ ಎಂದು ಕರೆ ನೀಡಿದರು.

ಮುಖಂಡರಾದ ಟಿ.ಎಂ.ಪ್ರಕಾಶ್, ಸರೋಜಮ್ಮ, ರಮೇಶ್ ಚಂದ್ರ, ಕುಮಾರ್, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!