Friday, September 20, 2024

ಪ್ರಾಯೋಗಿಕ ಆವೃತ್ತಿ

ಲಯನ್ಸ್ ಸಂಸ್ಥೆಗಳಿಂದ ಹಲವು ಸಮಾಜ ಸೇವಾ ಕಾರ್ಯ: ಧನಂಜಯ ದರಸಗುಪ್ಪೆ

ಮಹಿಳೆಯರಿಗೆ ಹೊಲಿಗೆ ಯಂತ್ರ -ಸಾನಿಟರಿ ವೆಂಡಿಂಗ್ ಅಂಡ್ ಬರ್ನಿಂಗ್ ಮಷೀನ್,ವಿದ್ಯಾರ್ಥಿಗಳಿಗೆ ಕಂಪ್ಯೂಟರ್ -ಲ್ಯಾಪ್ ಟಾಪ್, ಆರ್ಥಿಕ ಧನಸಹಾಯ ಹಾಗೂ ಶಾಲೆ-ಕಾಲೇಜುಗಳಿಗೆ ಶುದ್ಧ ಕುಡಿಯುವ ನೀರು ಘಟಕಗಳ ಕೊಡುಗೆ, ರಕ್ತ ಸಂಗ್ರಹಣೆ ಕ್ಯಾಂಪ್, ಅರೋಗ್ಯ ಶಿಬಿರ, ಹೀಯರಿಂಗ್ ತಪಾಸಣೆ ಹಾಗೂ ಪರಿಕರ ವಿತರಣೆ,ಬೀದಿ ವ್ಯಾಪಾರಿಗಳಿಗೆ ಕೊಡೆ ಹಾಗೂ ತಳ್ಳುವ ಗಾಡಿ ವಿತರಣೆ, ಸಸಿಗಳ ವಿತರಣೆ -ನೆಡುವ -ಪೋಷಣೆ ಮಾಡುವಂತಹ ಹಲವು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಲಯನ್ಸ್ ಕೈಗೊಂಡಿದೆ ಎಂದು ವಯಯಾಧ್ಯಕ್ಷ ಲಯನ್ ಜಿ. ಧನಂಜಯ ದರಸಗುಪ್ಪೆ ಹೇಳಿದರು.

ಮಂಡ್ಯದ ವಿದ್ಯಾನಗರದಲ್ಲಿರುವ ಕರುನಾಡು ಕೇಬಲ್ ಲಿಂಕ್ ಸಭಾಂಗಣದಲ್ಲಿ ಅಂತರ ರಾಷ್ಟ್ರೀಯ ಲಯನ್ಸ್ ಜಿಲ್ಲೆ -317-ಜಿ,  ಪ್ರಾಂತ್ಯ -8, ವಲಯ -2ರ, ” ಜಿಲ್ಲಾ ರಾಜ್ಯಪಾಲರ 2ನೇ ವಲಯ ಮಾರ್ಗದರ್ಶನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಗಳ ಮುಖಾಂತರ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯಕ್ರಮ ಗಮನಿಸುತ್ತಿರುವ ಸೇವಾ ಮನೋಭಾವನೆಯ ಹಲವು ಮಂದಿ ಲಯನ್ಸ್ ಕ್ಲಬ್ ಗಳ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಿರುವುದು ಸ್ವಾಗತಾರ್ಹ ಎಂದರು.

317-ಜಿ ಯ ಜಿಲ್ಲಾ ರಾಜ್ಯಪಾಲರಾದ ಡಾ. ಲಯನ್.ಎನ್.ಕೃಷ್ಣೆಗೌಡರ ಮಾರ್ಗದರ್ಶನದಂತೆ ಮಂಡ್ಯ -ಮೈಸೂರು -ಚಾಮರಾಜನಗರ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡು, 94 ಕ್ಲಬ್ ಗಳ ಮುಖಾಂತರ,ಸಹಾಯದ ಅವಶ್ಯಕತೆ ಇರುವವರನ್ನು ಗುರುತಿಸಿ, ತಮ್ಮ ಇತಿ -ಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.

ಜಿಲ್ಲಾ ಅಂಬಾಸಡರ್ ಲ.ಆನಂದ್, ಪ್ರಾಂತ್ಯ -8ರ ಪ್ರಾಂತೀಯ ಅಧ್ಯಕ್ಷ ಲ. ಎಂ. ಆರ್. ಮಂಜು, ಜಿ. ಈ. ಟಿ ಕೋ -ಆರ್ಡಿ ನೆಟರ್ ಲ. ಹನುಮಂತಯ್ಯ ಮಾತನಾಡಿದರು.

ಈ ಸಭೆಯಲ್ಲಿ ಕ್ವೆಸ್ಟ್ ಕೋ -ಆರ್ಡಿನೆಟರ್ ಲ. ಚಂದ್ರಲಿಂಗು,ಮಂಡ್ಯದ ಲಯನ್ಸ್ ಕ್ಲಬ್ ಗಳಾದ ನಾಲ್ವಡಿ-ಯ ಲ. ಕೆ. ಶಿವಲಿಂಗಯ್ಯ, ಲ. ಶಿವಲಿಂಗೇಗೌಡ, ಲ. ಜಯಕುಮಾರ್,ನಾಗಮಂಗಲ ಸೆಂಟ್ರಲ್ -ನ ಲ. ಮಹೇಶ್, ಲ. ನಂಜುಂಡೇಗೌಡ, ಕೆ.ಎಂ. ದೊಡ್ಡಿ ಲ. ಲಕ್ಷ್ಮೀಶ್, ಲ. ರವಿಕುಮಾರ್, ಲ. ಚಂದ್ರು,ಹಾಗೂ ಬಸರಾಳು ಲಯನ್ಸ್ ಕ್ಲಬ್ ನ ಲ. ಪ್ರದೀಪ್, ಹಾಗೂ,ಲ. ಬಿ.ಲಿಂಗೇಗೌಡ, ಲ. ಎಂ. ಈ. ಸುಭಾಸ್,ಹಾಗೂ ಇತರರು ಉಪಸ್ಥಿತರಿದ್ದು, ಲ. ಬಿ. ಲಿಂಗೇಗೌಡ ಕಾರ್ಯಕ್ರಮ ನಿರೂಪಿಸಿದರು..

ಇದೇ ಸಂದರ್ಭದಲ್ಲಿ, ಲ. ನಂದಕಿಶೋರ್ ರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಸರ್ವರಿಗೂ ಎಳ್ಳು -ಬೆಲ್ಲ ವಿತರಿಸಿ ಮುಂಗಡವಾಗಿ ಸಂಕ್ರಾಂತಿ ಶುಭಾಶಯ ಕೋರುವ ಮೂಲಕ ಸ್ವಾಗತಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!