Thursday, September 19, 2024

ಪ್ರಾಯೋಗಿಕ ಆವೃತ್ತಿ

ನೀರಾವರಿ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ ಕೆಎನ್ಎನ್: ಡಾ. ರಾಮೇಗೌಡ

ನೀರಾವರಿ ಮತ್ತು ಪಶುಸಂಗೋಪನೆ ಸಚಿವರಾಗಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ಯಾವ ರೀತಿ ಸಾಧನೆ ಮಾಡಬಹುದು ಎನ್ನುವುದನ್ನುಕೆ.ಎನ್ ನಾಗೇಗೌಡರು ತೋರಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ. ಎನ್.ಎಸ್ ರಾಮೇಗೌಡ ತಿಳಿಸಿದರು.

ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಶಾಂತಿ ಸಮುದಾಯಭವನದಲ್ಲಿ ನಡೆದ ದಿ.ಕೆ.ಎನ್ ನಾಗೇಗೌಡರ 20ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸಮಾಜ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರಾವರಿ ಮತ್ತು ಪಶುಸಂಗೋಪನೆ ಸಚಿವರಾಗಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ಯಾವ ರೀತಿ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ, ಸರ್ಕಾರ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ, ಆದರೇ ಅಂದಿಯೇ ಕೆ.ಎನ್ ನಾಗೇಗೌಡರು ನೀರಾವರಿ ಸಚಿವರಾಗಿ ಕಾಲುವೆಗಳಲ್ಲಿ ಹೊಸ ರೂಪವನ್ನು ಕೊಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸಲು ಶ್ರಮಿಸಿದ್ದರು, ಅಂದೀನ ದೂರದೃಷ್ಠಿ ಫಲವೇ ರೈತರಿಗೆ ಸಮರ್ಪಕ ನೀರು ಸಿಗುಂತಾಗಿದೆ ಎಂದರು.

ಶಿಕ್ಷಣಯಿಂದಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ತಿಳಿದ ದಿ. ಮಾಜಿ ಸಚಿವ ಕೆ.ಎನ್ ನಾಗೇಗೌಡರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಕಲ್ಪದೊಂದಿಗೆ 1970ರಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪನೆ ಮಾಡಿದರು, ಇದರ ಪ್ರತಿಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತು ಬದುಕನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ,ರಾಜಕೀಯ ಮತ್ತು ಶಿಕ್ಷಣದ ಮೌಲ್ಯಗಳು ಕಡಿಮೆಯಾಗುತ್ತಿ ರುವ ಪ್ರಸ್ತುತ ಸಂದರ್ಭದಲ್ಲಿ ಹಿರಿಯ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಮೌಲ್ಯವನ್ನು ಹೆಚ್ಚಿಸಲು ಒತ್ತು ನೀಡಬೇಕೆಂದು ತಿಳಿಸಿದರು.

nudikarnataka.com

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ಮಾತನಾಡಿ, ಆಧುನೀಕತೆ ತಕ್ಕಂತೆ ಶಾಂತಿ ಸಮುದಾನ ಭವನವನ್ನು ಬದಲಾವಣೆ ಮಾಡಿಕೊಳ್ಳಬೇಕು, ಕೆ.ಎನ್ ನಾಗೇಗೌಡ ಮಂತ್ರಿಯಾಗಿದ್ದರೂ ಮುಖ್ಯಮಂತ್ರಿಯನ್ನೇ ಪ್ರಶ್ವಿಸುವ ಧೈರ್ಯ ಹೊಂದಿದ್ದರು, ಐಎಎಸ್ ಐಪಿಎಸ್ ಅಧಿಕಾರಿಗಳು ಇವರನ್ನು ಕಂಡರೇ ಭಯ ಪಡುವ ರೀತಿಯಲ್ಲಿ ಕಾಜಕಾರಣ ಮಾಡುತ್ತಿದ್ದರು, ಪ್ರತಿವರ್ಷ ಕೆ.ಎನ್ ನಾಗೇಗೌಡರನ್ನು ಸ್ಮರಿಸುವ ಕಾರ್ಯಕ್ರಮ ಪ್ರತಿವರ್ಷ ನಡೆಯಲಿ ಎಂದು ಆಶೀಸಿದರು.

ಶಂಕರೇಗೌಡ, ಚೌಡಯ್ಯ, ವೀರಣ್ಣಗೌಡ, ಜಿ. ಮಾದೇಗೌಡ, ಎಸ್.ಎಂ ಕೃಷ್ಣ, ಕೆಎನ್ ನಾಗೇಗೌಡ ಸೇರಿದಂತೆ ಹಲವಾರು ಬಲಿಷ್ಠ ನಾಯಕರನ್ನು ಹೊಂದಿದ್ದ ಮಂಡ್ಯ ಜಿಲ್ಲೆಯಲ್ಲಿ ಇತ್ತಿಚಿಗೆ ಅಂತಹ ನಾಯಕರನ್ನು ಕಾಣಲು ಸಾಧ್ಯವಾಗುತ್ತಿಲ್ಲ, ಕೆ.ಎನ್ ನಾಗೇಗೌಡರು ತಮಗೆ ಸಿಕ್ಕಿದ ಸಚಿವ ಸ್ಥಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ದಿ.ಕೆ.ಎನ್ ನಾಗೇಗೌಡರು ಯಾವುದೇ ಖಾತೆಯನ್ನು ಕೊಟ್ಟರೂ ಸಮರ್ಥವಾಗಿ ನಿರ್ವಹಿಸಬಲ್ಲ ರಾಜಕಾರಣಿಯಾಗಿದ್ದರು. ಪಶು ಸಂಗೋಪನೆಯ ಸಚಿವರಾಗಿದ್ದ ಸಂದರ್ಭದಲ್ಲಿ ಪಶುಪಕ್ಷಿಗಳಿಗೆ ನ್ಯಾಯವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಶಾಂತಿ ಕಾಲೇಜು ಈ ಭಾಗದ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದು, ವೃತ್ತಿಪರ ಕೊರ್ಸ್ಗಳು ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಇಂಜಿನಿಯರ್ ಸಂಘದ ಗೌರವ ಅಧ್ಯಕ್ಷ ಡಿ.ಎಸ್ ದೇವರಾಜು ಅವರಿಗೆ ನೀರಾವರಿ ಕ್ಷೇತ್ರ ಪ್ರಶಸ್ತಿ ಹಾಗೂ ಅರಕೆರೆ ಪಂಚಮುಖಿ ಹಾಲಿನ ಡೈರಿ ಎ.ಸಿ ರಮೇಶ್ ಅವರಿಗೆ ಪಶುಸಂಗೋಪನಾ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ನಾಗಮಣಿ ನಾಗೇಗೌಡ ವಹಿಸಿದ್ದರು. ವೇದಿಕೆಯಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಚ್.ಎಂ ಮಹದೇವಸ್ವಾಮಿ, ಕಾರ್ಯದರ್ಶಿ ಎಂ.ಎಚ್ ಕೆಂಪಯ್ಯ, ಖಜಾಂಚಿ ಕೆ.ಸಿ ಪುಟ್ಟೀರೇಗೌಡ, ಸದಸ್ಯ ಎಂ.ಎನ್ ಅರ್ಜುನ್‌ಗೌಡ, ಕೃಷ್ಣ ಕಾರ್ಯದರ್ಶಿ ಪುಟ್ಟರಾಜು. ಪ್ರಾಂಶುಪಾಲ ರಾದ ವೇದಮೂರ್ತಿ, ಶಿವಪ್ಪ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!