Friday, May 17, 2024

ಪ್ರಾಯೋಗಿಕ ಆವೃತ್ತಿ

ವಾಣಿಜ್ಯ ಎಲ್​​ಪಿಜಿ ಸಿಲಿಂಡರ್ ಇನ್ನಷ್ಟು ದುಬಾರಿ: ಮತ್ತೇ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಕೇಂದ್ರ ಸರ್ಕಾರವು ಇಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದೆ. ಇದರ ನಡುವೆಯೇ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್ ಗ್ರಾಹಕರಿಗೆ ಸರ್ಕಾರ ಶಾಕ್ ನೀಡಿದೆ.

ವಾಣಿಜ್ಯ ಬಳಕೆಯ 19 ಕೆಜಿಯಷ್ಟಿರುವ ಸಿಲಿಂಡರ್​ ದರವನ್ನು 14 ರೂಪಾಯಿ ಏರಿಕೆ ಮಾಡಲಾಗಿದೆ. ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪರಿಷ್ಕೃತ ಬೆಲೆ ಇಂದಿನಿಂದಲೇ (ಫೆಬ್ರವರಿ 1) ಅನ್ವಯವಾಗಲಿದೆ ಎಂದು ತೈಲ ಕಂಪನಿಗಳು ಮಾಹಿತಿ ನೀಡಿದೆ.

ಕಳೆದ ತಿಂಗಳು ಕೂಡ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತುಸು ಹೆಚ್ಚಳ ಮಾಡಿದ್ದವು. ಪ್ರಸಕ್ತ ಬೆಲೆ ಏರಿಕೆಯ ನಂತರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ದೆಹಲಿಯಲ್ಲಿ 1,769.50 ರೂ. ಆಗಿದೆ.

ಯಾವ ನಗರದಲ್ಲಿ ಎಷ್ಟು ದರ?

ದೆಹಲಿ- 1769.50 ರೂ.
ಕೋಲ್ಕತ್ತಾ- 1887.00 ರೂ.
ಮುಂಬೈ-1723.50 ರೂ.
ಚೆನ್ನೈ- 1937 ರೂ.

ಗೃಹಬಳಕೆಯ ಸಿಲಿಂಡರ್‌ ಬೆಲೆ 17 ಬಾರಿ ಬದಲಾವಣೆ

ಕಳೆದ ಮೂರು ವರ್ಷಗಳಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ದರ 17 ಬಾರಿ ಬದಲಾಗಿದೆ. ವಾಣಿಜ್ಯ ಸಿಲಿಂಡರ್​ಗಳ ದರ ಬಹುತೇಕ ಪ್ರತಿ ತಿಂಗಳು ಬದಲಾಗುತ್ತಿದೆ. ಈ ಬದಲಾವಣೆಗಳಿಂದಾಗಿ, ಕೆಲವೊಮ್ಮೆ ಗ್ರಾಹಕರಿಗೆ ಪ್ರಯೋಜನವಾದರೆ ಇನ್ನು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜನವರಿ 1, 2021 ರಂದು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,349 ರೂ ಇತ್ತು. ಅಂದಿನಿಂದ ಸುಮಾರು 50 ಬಾರಿ ದರ ಪರಿಷ್ಕರಣೆಯಾಗಿದೆ.

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಆಗಸ್ಟ್ 30 ರಂದು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೊನೆಯ ಬಾರಿ ಬದಲಾವಣೆ ಮಾಡಲಾಗಿತ್ತು. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 903 ರೂ., ಕೋಲ್ಕತ್ತಾದಲ್ಲಿ 929 ರೂ., ಮುಂಬೈಯಲ್ಲಿ 902.50 ರೂ., ಚೆನ್ನೈನಲ್ಲಿ 918.50 ರೂ. ಇದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!