Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ವಾಪಸ್ಸು ಬರಬೇಕಾದ ಅವಶ್ಯಕತೆ ಇರುವುದು ಕುಮಾರಸ್ವಾಮಿಗೆ ಮಾತ್ರ !

ಪ್ರಜ್ವಲ್ ವಿದೇಶಕ್ಕೆ ಹಾರಿ ಹೋಗಿ ಬರೋಬ್ಬರಿ 25 ದಿನಗಳು ಉರುಳಿದಂತೆ ಕುಮಾರಸ್ವಾಮಿ ಅವರಿಗೆ ಟೆನ್ಷನ್ ಕೂಡ ಜಾಸ್ತಿಯಾಗುತ್ತಿದೆ.

ಪ್ರಜ್ವಲ್ ಎಂಬ ಆರೋಪಿಯನ್ನು ಹಿಡಿದು ತರಬೇಕು ಎನ್ನುವ ಉತ್ಸಾಹ ರಾಜ್ಯ ಸರ್ಕಾರಕ್ಕೆ ಇಲ್ಲ. ಏಕೆಂದರೆ ಪ್ರಜ್ವಲ್ ಎಷ್ಟು ದಿವಸ ಕಾನೂನಿಂದ ಹೊರಗಿರುತ್ತಾನೋ ಅಲ್ಲಿಯವರೆಗೂ ಅದು ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್. ಅದೇ ರೀತಿ ಎಸ್ಐಟಿ ತಂಡ ಕೂಡ ನೇರವಾಗಿ ಹೊರ ದೇಶಗಳೊಂದಿಗೆ ಕಾನೂನು ವ್ಯವಹಾರ ಮಾಡುವಂತಿಲ್ಲ. ಏನಿದ್ದರೂ ಕೇಂದ್ರ‌ ಸರ್ಕಾರದ ಏಜೆನ್ಸಿಗಳ ಮೂಲಕ ಪ್ರಜ್ವಲ್ ಕರೆ ತರಬೇಕು.ಹಾಗಾಗಿ ಪ್ರಜ್ವಲ್ ಬಂದರೆ ಏರ್ಪೋರ್ಟ್ ನಲ್ಲಿ ಹಿಡಿದು ಕೊಳ್ಳೊಣ ಎಂದು ಎಸ್ಐಟಿ ಕೈಕಟ್ಟಿ‌ ಕುಳಿತಿದೆ.

ಇನ್ನೂ ಪ್ರಜ್ವಲ್ ತಂದೆ ರೇವಣ್ಣ ಮತ್ತು ತಾಯಿ ಭವಾನಿ ಅವರಿಗೆ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರಲ್ಲಿಯೇ ಬ್ಯುಸಿ ಆಗಿದ್ದು, ಈಗ ಪ್ರಜ್ವಲ್ ಬಂದರೂ ಸರಿ,ಬರದೇ ಇದ್ದರೂ ಸರಿ ಎನ್ನುವಂತಿದ್ದಾರೆ.ಆದರೆ ಕುಮಾರಸ್ವಾಮಿ ಪರಿಸ್ಥಿತಿ ಹಾಗಿಲ್ಲ, ಮುಂದೆ ಎನ್.ಡಿ.ಎ ಗೆದ್ದು ಹೊಸ ಸರ್ಕಾರ ರಚನೆಯಾಗಿ ಮೋದಿಜೀ ಜೆಡಿಎಸ್ ಕಡೆಯಿಂದ ಯಾರು ಮಂತ್ರಿಯಾಗಬೇಕು ಎನ್ನುವ ಪ್ರಶ್ನೆ ಬಂದಾಗ ಎಚ್.ಡಿ. ಕುಮಾರಸ್ವಾಮಿ ಹೆಸರು ಸ್ವಾಭಾವಿಕವಾಗಿಯೇ ಮುಂದೆ ಬರುತ್ತದೆ.

ಪ್ರಜ್ವಲ್ ಕೈಗೆ ಸಿಗದೆ ವಿದೇಶದಲ್ಲಿ ಕುಳಿತರೆ ಮೋದಿಜೀ ದೇವೇಗೌಡರ ಕುಟುಂಬದವರನ್ನು ಮಂತ್ರಿ ಮಾಡಲು ಒಪ್ಪುವುದಿಲ್ಲ. ಸಾಕಷ್ಟು ಕಸರತ್ತು ಮಾಡಿ‌ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರದಲ್ಲಿ ಮಂತ್ರಿ ಆಗದೇ ಹೋದರೆ ಇಷ್ಟು ದಿನ ಮಾಡಿದ್ದೆಲ್ಲವೂ ನೀರಿನಲ್ಲಿ ಹೋಮ‌ ಮಾಡಿದಂತೆ ಆಗುತ್ತೆ. ಹಾಗಾಗಿ ಹೇಗಾದರೂ ಮಾಡಿ‌ ಪ್ರಜ್ವಲ್ ರೇವಣ್ಣನನ್ನು ಭಾರತಕ್ಕೆ ವಾಪಸ್ಸು ಕರೆಸಿ ಹೊಸ ಸರ್ಕಾರ ರಚನೆಯಾಗುದರಲ್ಲಿ ಅವನಿಗೆ ಜಾಮೀನು ಕೊಡಿಸಿಬಿಟ್ಟರೆ ಮುಂದೆ ಆರಾಮವಾಗಿ ಹೊಸ ಸರ್ಕಾರದಲ್ಲಿ‌ ಮಂತ್ರಿಯಾಗಬಹುದು ಎಂಬುದು ಕುಮಾರಸ್ವಾಮಿ ಅವರ ಅಲೋಚನೆ ಎಂದು ರಾಜಕೀಯ ಪಡಸಾಲೆಗಳಲ್ಲಿ ಚರ್ಚೆಯಾಗುತ್ತಿದೆ.

ಇದೇ ಕಾರಣಕ್ಕೆ ಸೋಮವಾರ ಮಾಧ್ಯಮಗಳ ಮೂಲಕ ದೇವೇಗೌಡರು ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಗೌರವ ಇದ್ದರೆ ಎಲ್ಲಿದ್ದರೂ ವಾಪಾಸ್ ಬಾ ಎಂದು ಪ್ರಜ್ವಲ್ ರೇವಣ್ಣನಿಗೆ ಮನವಿ ಮಾಡಿದ್ದ ಕುಮಾರಸ್ವಾಮಿ ಮಂಗಳವಾರ ಕೂಡ ಪ್ರಜ್ವಲ್ ಎಲ್ಲೇ ಇದ್ದರೂ ತಕ್ಷಣ ಎಸ್ಐಟಿ ಮುಂದೆ ಹಾಜರಾಗು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

Related Articles

1 COMMENT

  1. ಬಡ ಹೆಣ್ಣುಮಕ್ಕಳ ಜೀವನ ಹಾಳು ಮಾಡಿ,, ತಾವು ಮಾತ್ರ ಅಧಿಕಾರ ಹಣದ ಕನಸು ಕಾಣುವ ಕ್ರೂರ ರಾಜಕಾರಣ,,ರೈತರ ಮಕ್ಕಳು ಇವರು,,,ಆ ಶಬ್ದಕ್ಕೆ ಅಪಮಾನ,,ಮತದಾರರು ಬುದ್ಧಿವಂತರಾಗದೆ ಇಂಥಾ ಹೇಸಿ ರಾಜಕಾರಣದ ಅಟ್ಟಹಾಸ ನಿರಂತರವಾಗಿ ನಡೆಯುತ್ತಲೇ ಇರುತ್ತವೆ

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!