Friday, September 20, 2024

ಪ್ರಾಯೋಗಿಕ ಆವೃತ್ತಿ

ಆದರ್ಶವಿಲ್ಲದೇ ಸತ್ತರೆ ಬದುಕಿಗೆ ಅವಮಾನ: ಡಾ.ಸಿ.ಎನ್ ಮಂಜುನಾಥ್

‘ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸಾಧನೆಯಿಲ್ಲದೇ ಸತ್ತರೆ ಸಾವಿಗೆ ಅವಮಾನ, ಹಾಗೆಯೇ ಆದರ್ಶವಿಲ್ಲದೇ ಸತ್ತರೆ ಬದುಕಿಗೆ ಅವಮಾನ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅಭಿಪ್ರಾಯಪಟ್ಟರು.

ಮಂಡ್ಯನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಭಾನುವಾರ ಸಂಜೆ ನಡೆದ ಇಂಡವಾಳು ಹೆಚ್ ಹೊನ್ನಪ್ಪ ಅವರಕುರಿತ ‘ನೆಲದ ಕಣ್ಣು’ ಕೃತಿ ಬಿಡುಗಡೆ, ಹೆಚ್ ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಪ್ರದಾನ ಹಾಗೂ ಇಂಡುವಾಳು ಹೆಚ್ ಹೊನ್ನಪ್ಪ ಸೇವಾ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೆಚ್.ಹೊನ್ನಪ್ಪ ಅವರು ನನಗೆ ಪರಿಚಯ, ಅವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು, ಅವರ ಜೀವನ ಕುರಿತ ‘ನೆಲದಕಣ್ಣು’ ಕೃತಿಯನ್ನು ಓದಿದಾಗ ಹಲವು ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ಜೀವನದಲ್ಲಿ ಮೂರು ವಿಚಾರಗಳು ಮುಖ್ಯವಾಗುತ್ತದೆ, ಒಂದು ಜನರ ಮನಸ್ಸನ್ನ ಗೆಲ್ಲಬೇಕು, ಎರಡನೇಯದಾಗಿ ದ್ವೇಷ, ಅಸೂಯೆ ಹಾಗೂ ಮತ್ಸರವನ್ನು ಬಿಡಬೇಕು. ಮೂರನೇಯದಾಗಿ ಪ್ರೀತಿಯನ್ನು ಹಂಚಬೇಕು ಹಾಗೂ ತಮ್ಮ ಪ್ರತಿಭೆಯನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು ಎಂದು ತಿಳಿಸಿದರು.

ಹೆಚ್.ಹೊನ್ನಪ್ಪ ಅವರಿಗೆ ಅಧಿಕಾರದ ದಾಹವಿರಲಿಲ್ಲ, ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ 2ನೇ ಬಾರಿಗೆ ಮೈಷುಗರ್ ಅಧ್ಯಕ್ಷರಾಗುವಂತೆ ಕೇಳಲಾಗಿತ್ತು, ಆಗ ಹೊನ್ನಪ್ಪವವರು, ‘ನಾನು ಈಗಾಗಲೇ ಒಂದು ಬಾರಿ ಅಧ್ಯಕ್ಷನಾಗಿದ್ದೇನೆ, ಮತ್ತೊಬ್ಬರಿಗೆ ಅವಕಾಶ ಕೊಡಿ’ ಎಂದು ಹೇಳಿದ್ದರು. ಇದು ಅವರ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ತಿಳಿಸುತ್ತದೆ ಎಂದರು.

ಡಾ.ಎಂ.ಎಸ್ ಅನಿತಾ ರಚಿಸಿಸಿರುವ ಹೆಚ್. ಹೊನ್ನಪ್ಪ ಅವರ ಕುರಿತ ‘ನೆಲದಕಣ್ಣು’ ಕೃತಿಯನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್ ಕೃತಿ ಬಿಡುಗಡೆ ಮಾಡಿದರು. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅಧ್ಯಕ್ಷತೆ ವಹಿಸಿ, ಹೆಚ್. ಹೊನ್ನಪ್ಪ ಕ್ರೀಡಾ ಪ್ರಶಸ್ತಿಯನ್ನು ಫುಟ್ಬಾಲ್ ಆಟಗಾರ ಬಿ ವೆಂಕಟ್ ಅವರಿಗೆ ಪ್ರದಾನ ಮಾಡಿದರು.

ಹೆಚ್.ಹೊನ್ನಪ್ಪ ಸಂಸ್ಮರಣೆ ಕೃತಿ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್ ಬಿ ಶಂಕರಗೌಡ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ, ಚಂದಗಾಲು ಲೋಕೇಶ್, ಡಾ.ಆದರ್ಶ್ ಹೊನ್ನಪ್ಪ, ನಾಗಪ್ಪ, ಮಂಜುಳ ಉದಯಶಂಕರ್ ಹಾಗೂ ಡಾ.ಎಂ.ಎಸ್ ಅನಿತಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!