Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರವರ್ಗ-1ರ ಜಾತಿಗಳ ನ್ಯಾಯಬದ್ಧ ಬೇಡಿಕೆ ಈಡೇರಿಸಿ

ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರವರ್ಗ -೧ರ ಜಾತಿಗೆ ಸಮರ್ಪಕವಾದ ಮೀಸಲಾತಿ ನೀಡುವ ಮೂಲಕ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಪ್ರವರ್ಗ-೧ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಒತ್ತಾಯ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳು ಸೇರಿದಂತೆ ಒಟ್ಟು 95 ಮುಖ್ಯ ಜಾತಿಗಳು 376 ಉಪಜಾತಿಗಳು ಪ್ರವರ್ಗ-1ರಲ್ಲಿ ಬರುತ್ತದೆ ಇದರಲ್ಲಿ ಬೆಸ್ತ, ಗೊಲ್ಲ, ಉಪ್ಪಾರ, ಹೆಳವ, ಬುಡುಬುಡುಕಿ,ಬಸವಿ, ಬೈರಾಗಿ,ಸನ್ಯಾಸಿ ಮೊದಲಾದ ಜಾತಿಗಳು ಸೇರಿವೆ ಎಂದರು.

ಈ ಜಾತಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಇವರ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ನಮ್ಮ ಒಕ್ಕೂಟ ನಿರಂತರವಾಗಿ ಪ್ರಯತ್ನಿಸುತ್ತಿದೆ. ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 90 ವಿಧಾನಸಭಾ ಕ್ಷೇತ್ರದಲ್ಲಿ ಮತ್ತು 6 ಲೋಕಸಭಾ ಕ್ಷೇತ್ರಗಳಲ್ಲಿ ಪ್ರವರ್ಗ 1 ನಿರ್ಣಾಯಕವಾಗಿದ್ದರೂ ರಾಜಕೀಯ ಅಧಿಕಾರ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಪ್ರವರ್ಗ-1ರ ಜಾತಿಗಳ ಕೋಶವನ್ನು ಮರು ಸ್ಥಾಪಿಸಿ ವಿದ್ಯಾರ್ಥಿ ನಿಲಯವನ್ನು ಪುನರಾರಂಭಿಸಿ ಇವುಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸ ಬೇಕು. ಹಾಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರವರ್ಗ-1ರ ಜಾತಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡದೆ, ಬಲಿಷ್ಠ ಹಿಂದುಳಿದ ಜಾತಿಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗದೆ ಇರುವುದರಿಂದ ಪ್ರವರ್ಗ-1 ರ ಜಾತಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನಿಗದಿ ಪಡಿಸಬೇಕು ಎಂದು ಒತ್ತಾಯ ಮಾಡಿದರು.

ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಒಂದು ಕೋಟಿಗೂ ಹೆಚ್ಚು ಜನರಿರುವ ಪ್ರವರ್ಗ-1 ರ ಜನರಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಶೇ. 4% ಮಾತ್ರ ಮೀಸಲಾತಿ ದೊರಕುತ್ತಿದೆ, ಆದರೆ ಶೇ. 10ಜನಸಂಖ್ಯೆ ಇರುವ ಪ್ರವರ್ಗ-1ರ ಜಾತಿಗಳ ಜನರಿಗೆ ಕನಿಷ್ಠ 8% ಗಿಂತ ಹೆಚ್ಚು ಮೀಸಲಾತಿ ನಿಗದಿಗೊಳಿಸಿ ಈ ಜನರ ಸಾಮಾಜಿಕ ನ್ಯಾಯ ಕಾಪಾಡಬೇಕು ಎಂದು ಆಗ್ರಹಿಸಿದರು.

ಹಾಲಿ ಬಿಜೆಪಿ ಪಕ್ಷದ ಸರ್ಕಾರದಲ್ಲಿ ಪ್ರವರ್ಗ-1ರ ಜಾತಿಗಳ ಇಬ್ಬರು ಶಾಸಕರಿದ್ದು, ಅವರಿಬ್ಬರಿಗೂ ಸಹ ಬರುವ ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಡ್ಡಾಯವಾಗಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ಪ್ರತಿ ವರ್ಷ ಪ್ರವರ್ಗ-1ರ ಅಭಿವೃದ್ಧಿ ನಿಗಮಗಳಿಗೆ ಪ್ರತ್ಯೇಕವಾಗಿ ತಲಾ 100ಕೋಟಿ ರೂಪಾಯಿಗಳ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ನಾಗರತ್ನ, ನಿಂಗಯ್ಯ, ಉಮಾಕಾಂತ್,ಉಮೇಶ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!