Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಬದಲಾವಣೆ ವಿಚಾರ| ಮೊದಲ ಬಾರಿ ಶಾಸಕರಾಗಿ ಬಂದವರು ಬಹಳ ಹಾರಾಡುತ್ತಿದ್ದಾರೆ : ನರೇಂದ್ರಸ್ವಾಮಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಗೆ ಬಂದಿರುವ ಬೆನ್ನಲ್ಲೇ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆಯೊಂದನ್ನು ನೀಡಿದ್ದು, ಮೊದಲನೇ ಬಾರಿ ಆಯ್ಕೆಯಾಗಿ ಬಂದ ಶಾಸಕರು, ಬಹಳ ಹಾರಾಡುತ್ತಿದ್ದಾರೆ. ಈ ವಿಚಾರವನ್ನ ಬಹಿರಂಗವಾಗಿ ಮಾತನಾಡದೇ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ.

ಮಳವಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಅತಿಹೆಚ್ಚು ಕಾಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವನು ನಾನೇ. ನನಗೆ ಅನ್ಯಾಯ ಆಯ್ತು ಅಂತಾ ಬೀದಿಯಲ್ಲಿ ಮಾತನಾಡೋಕೆ ಆಗುತ್ತಾ? ಬೇರೆ ಸಚಿವರಿಗಿಂತಲೂ ಯೋಗ್ಯತೆ, ಅರ್ಹತೆ, ಸೀನಿಯಾರಿಟಿ ನನಗಿದೆ. ಆದರೆ ಪಕ್ಷದ ತೀರ್ಮಾನವನ್ನು ತಲೆಬಾಗಿ ಒಪ್ಪಿದ್ದೇನೆ. ಅದರಂತೆ ಎಲ್ಲರೂ ಇರಬೇಕು ಎಂದು ತಿಳಿಹೇಳಿದ್ದಾರೆ.

ಸಿದ್ದರಾಮಯ್ಯ ಶಾಸಕರ ಆಯ್ಕೆ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಪಕ್ಷ ಆಯ್ಕೆ ಮಾಡಿಲ್ಲ, ಶಾಸಕರ ಅಭಿಪ್ರಾಯದ ಮೇರೆಗೆ ಅವರನ್ನ ಮುಖ್ತಮಂತ್ರಿಗಳನ್ನಾಗಿ ಮಾಡಲಾಗಿದೆ. ಈಗಲೂ ನಮ್ಮ ಪಕ್ಷ ಶಾಸಕರ ಬಹುಮತದ ಅಭಿಪ್ರಾಯಕ್ಕೆ ಬದ್ಧವಾಗಿದೆ. 2013ರಲ್ಲೂ ವೋಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಾಯ್ತು. ಇದು ನಮ್ಮ ಪಕ್ಷದ ಇಂಟರ್ನಲ್ ಡೆಮಾಕ್ರಸಿ. ಈಗಲೂ ನಮ್ಮ ಪಕ್ಷ ಇಂಟರ್ನಲ್ ಡೆಮಾಕ್ರಸಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪಕ್ಷದ ಭವಿಷ್ಯ ದೃಷ್ಟಿಯಿಂದ ಸಮಯ ಸಂದರ್ಭ ನೋಡಿ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಾರ ಓಲೈಕೆಗಾಗಿಯೋ ಅಥವಾ ಹೊಗಳಿಕೆಗಾಗಿಯೋ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ತರುವುದು ಸರಿಯಲ್ಲ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!