Thursday, July 25, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಮಾಜಕ್ಕೆ ಡಾ.ಬಿ.ಸಿ.ರಾಯ್ ಕೊಡುಗೆ ಅಪಾರ: ಧನಂಜಯ 

ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ವತಿಯಿಂದ “ರಾಷ್ಟ್ರೀಯ ವೈದ್ಯರ ದಿನಾಚರಣೆ”ಯ ಪ್ರಯುಕ್ತ ಮಂಡ್ಯದ ತಾರಾ ಡಯಾಗ್ನೋಸ್ಟಿಕ್ ಸೆಂಟರ್ ನ ಮಾಲೀಕ ಹಾಗೂ ಸಾಹಿತಿ ಡಾ. ಕೆ.ಚಂದ್ರಶೇಖರ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಮಾಜಿ ವಲಯಾಧ್ಯಕ್ಷ ಜಿ. ಧನಂಜಯ ದರಸಗುಪ್ಪೆ ಮಾತನಾಡಿ,  ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಡಾ. ಬಿ.ಸಿ.ರಾಯ್ ಅವರು ವೈದ್ಯ ವೃತ್ತಿಯ ಜೊತೆಗೆ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿ ಜನಮನ್ನಣೆ ಗಳಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ದಶಕಗಳ ಕಾಲ ಸೇವೆಯನ್ನು ಸಲ್ಲಿಸಿದವರು. ಇವರು ಎಲ್ಲ ಕ್ಷೇತ್ರಗಳ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ 1961ರಲ್ಲಿ “ಭಾರತ ರತ್ನ ” ಬಿರುದು ನೀಡಿ ಗೌರವಿಸಿತ್ತು. ಇವರು ಜುಲೈ ಒಂದರಂದು ಜನಿಸಿದ್ದು, ಇವರ ಗೌರವಾರ್ಥ ಜುಲೈ ಒಂದರಂದು “ರಾಷ್ಟ್ರೀಯ ವೈದ್ಯರ ದಿನ “ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲ.ನರಸಿಂಹ ಮೂರ್ತಿ, ಜಿಇಟಿ ಕೋ ಆಡಿಟರ್ ಲ. ಹನುಮಂತಯ್ಯ, ಲ. ಸುಭಾಸ್,ಲ.ಲಿಂಗೇಗೌಡ, ಲ. ಶಿವಲಿಂಗಯ್ಯ, ಲ. ವೆಂಕಟೇಶ್,ಲ. ಮರೀಗೌಡ,ಲ. ಪ್ರದೀಪ್ ಮಂಜುನಾಥ್, ಮಂಗಲ ಶಿವಣ್ಣ,ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!