Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಆನ್ ಲೈನ್ ಮೂಲಕ ಹಾಲು ಖರೀದಿ ರೈತಸ್ನೇಹಿ: ಪ್ರಭುಲಿಂಗು

ರಾಜ್ಯದ್ಯಾಂತ ಏಕರೂಪದ ತಂತ್ರಾಂಶ ಬಳಸಿ ಅನ್ ಲೈನ್ ಬಳಕೆಮಾಡಿ ಹಾಲು ಖರೀದಿಸುವ ಮನ್ ಮುಲ್ ಕ್ರಮ ಹಾಲು ಉತ್ಪಾದಕ ಸ್ನೇಹಿಯಾದದ್ದು ಎಂದು ರೈತ ಮುಖಂಡ ಪ್ರಭುಲಿಂಗು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ರೈತಸಂಘದ ಮುಖಂಡರುಗಳು ಇಂದು ಮನ್ ಮುಲ್ ಕಛೇರಿಗೆ ಬೇಟಿ ನೀಡಿ ಆನ್‌ಲೈನ್ ವ್ಯವಸ್ಥೆ ಬಳಸಿ ಕಾಮನ್ ಸಾಪ್ಟ್ ವೇರ್ ಬಳಕೆಯ ಉಪಯುಕ್ತತೆ ಕುರಿತು ಚರ್ಚೆ ನಡೆಸಿದರು.

ಮನ್ ಮುಲ್ ನ ವ್ಯವಸ್ಥಾಪಕ ನಿರ್ದೆಶಕ ಡಾ: ಪಿ. ಆರ್. ಮಂಜೇಶ್ ಅವರು ರೈತ ಮುಖಂಡರುಗಳಿಗೆ ಕಾಮನ್ ಸಾಪ್ಟ್ ವೇರ್ ಬಳಕೆ ಹಾಲು ಉತ್ಪಾದಕ ಸ್ನೇಹಿ ಹಾಗೂ ಸಂಘದ ಅಭ್ಯುದಯಕ್ಕೆ ಪೂರಕವಾಗಿರುವ ಕುರಿತು ಸವಿವಿರ ಮಾಹಿತಿ ನೀಡಿದ್ದಾರೆ ಎಂದು ಪ್ರಭುಲಿಂಗು ತಿಳಿಸಿದ್ದಾರೆ.

ಮನ್ ಮುಲ್ ಅಧಿಕಾರಿಗಳ ನೀಡಿದ ಮಾಹಿತಿ ತೃಪ್ತಿಕರ ವಾಗಿದ್ದು, ಹಾಲು ಉತ್ಪಾದಕರ ಸಂಘದ ವ್ಯವಹರಣೆಯಲ್ಲಿ ಪಾರದರ್ಶಕತೆ ತರುವಲ್ಲಿ ಸಹಕರಿಯಾಗಿದೆ ಎಂದು ರೈತ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಮನ್ ಸಾಪ್ಟ್ ವೇರ್ ಬಳಕೆ ಮಾಡುವಲ್ಲಿ ಹಾಲು ಉತ್ಪಾದಕರಲ್ಲಿ ಉಂಟಾಗುವ ಸಂಶಯಗಳು ಅನುಮಾನಗಳನ್ನು ಪರಿಹರಿಸುವಲ್ಲಿ ಒಕ್ಕೂಟವು ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆ ಕೈಗೊಳ್ಳಲಿ ಎಂದು ಮನ್ ಮುಲ್ ಭೇಟಿ ವೇಳೆ ರೈತಮುಖಂಡರ ನಿಯೋಗ ಸಲಹೆ ನೀಡಿದೆ ಎಂದಿದ್ದಾರೆ.

ರೈತ ಸಂಘಟನೆ ಕೂಡ ಈ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಲಿದ್ದು, ಕಾಮನ್ ಸಾಪ್ಟ್ ವೇರ್ ಬಳಕೆಗೆ ಪ್ರೇರೆಪಿಸುವ ಜೊತೆಗೆ ಅದರ ಉಪಯುಕ್ತತೆ ಕುರಿತು ಜಾಗೃತಿ ಮೂಡಿಸಲಿದೆ ಎಂದು ತಿಳಿಸಿ ಬಂದಿರುವುದಾಗಿ ರೈತ ಮುಖಂಡ ಪ್ರಭುಲಿಂಗುರವರು ಮಾಹಿತಿ ಹಂಚಿಕೊಂಡಿದ್ದಾರೆ.

ಮದ್ದೂರಿನಲ್ಲಿ ಶನಿವಾರ ರೈತಸಂಘಟನೆಯು ಆನ್ ಲೈನ್ ಪದ್ದತಿ ಕೈ ಬಿಡುವಂತೆ ಮನ್ ಮುಲ್ ಗೆ ಆಗ್ರಹಿಸಿತ್ತು.
ಈ ಹಿನ್ನಲೆಯಲ್ಲಿ ಖುದ್ದು ಬೇಟಿ ನೀಡಿ ಕಾಮನ್ ಸಾಪ್ಟ್ ವೇರ್ ಬಳಕೆಯ ಸಾಧಕ ಭಾದಕ ಕುರಿತು ಚರ್ಚಿಸಿ ಅಗತ್ಯ ಸ್ಪಷ್ಠನೆ ಪಡೆದುಕ್ಕೊಂಡು, ತಂತ್ರಾಂಶ ಆಧರಿಸಿ ಹಾಲು ಖರೀದಿ ಕ್ರಮ ಸಂಘದ ಚಟುವಟಿಕೆಯಲ್ಲಿ ಪಾರದರ್ಶಕತೆ ತರುವ ಜೊತೆಗೆ ಹಾಲು ಉತ್ಪಾದಕರಲ್ಲಿ ಸಂಘದ ಜೊತೆಗಿನ ವ್ಯವಹಾರಿಕೆ ನಂಬುಗೆ ಹೆಚ್ಚಿಸಿ ಗುಣಮಟ್ಟದ ಹಾಲು ಸರಬರಾಜಿಗೆ ಪ್ರೇರಪಣೆ ನೀಡುವುದಲ್ಲದೆ, ನಂದಿನಿ ಉತ್ಪನ್ನದ ಕುರಿತು ಗ್ರಾಹಕರ ವಿಶ್ವಾಸ ವೃದ್ದಿಗೆ ಸಹಕಾರಿಯಾಗಲಿದೆ ಎಂದು ರೈತ ಮುಖಂಡ ಸೊ.ಶಿ. ಪ್ರಕಾಶ್ ಶ್ಲಾಘಿಸಿದರು.

ಸಭೆಯಲ್ಲಿರೈತ ಮುಖಂಡರಾದ ಕೆ ಜಿ ಉಮೇಶ್ ಕೊತ್ತನಹಳ್ಳಿ ದೇವರಹಳ್ಳಿ ರಾಮಲಿಂಗು ಕುಂಟನಹಳ್ಳಿ ಹಾಲು ಉತ್ಪಾದಕರ ಸಂಘದ ನೀರ್ದೆಶಕರಾದ ಮರಲಿಂಗು ಪಣ್ಣೆದೊಡ್ಡಿ ವೆಂಕಟೇಶ್ ಶ್ರೀ ಕಾ ಶ್ರೀ ನಿವಾಸ್ ಮತ್ತಿತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!