Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನುಡಿ ಜಾತ್ರೆ| ಆಗಮಿಸುವ ಮಹಿಳೆಯರ ಆತಿಥ್ಯಕ್ಕೆ ಸಿದ್ಧತೆ: ಸುನಂದ ಜಯರಾಂ

ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20,21 ಹಾಗೂ 22 ರಂದು ಮೂರು ದಿನಗಳ‌ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಲಿರುವ ಮಹಿಳೆಯರಿಗೆ ಉತ್ತಮ ಆತಿಥ್ಯ ನೀಡಬೇಕು ಎಂದು ಮಹಿಳಾ ಸಮಿತಿಯ ಅಧ್ಯಕ್ಷೆ ಹಾಗೂ ಮಹಿಳಾ ರೈತ ಮುಖಂಡರಾದ ಸುನಂದ ಜಯರಾಂ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರಿಗೆ ಬೇಕಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಬಾರಿ ಹೆಚ್ವಿನ ಮಹಿಳೆಯರು ನೊಂದಣಿ ಮಾಡಿಕೊಂಡು ಭಾಹವಹಿಸಲು ಯೋಜನೆ ರೂಪಿಸಬೇಕು ಎಂದರು.

ವಿನೂತನ ರೀತಿಯಲ್ಲಿ ಪೂರ್ಣಕುಂಭ ಈ ಬಾರಿ ಪೂರ್ಣಕುಂಭ ವಿನೂತನವಾಗಿರಬೇಕು. ಮಹಿಳೆಯರು ಅಕ್ಷರ ಜಾತ್ರೆಯ ರೀತಿ ವಿವಿಧ ಸಾಹಿತಿಗಳ ಪುಸ್ತಕ ಗಳನ್ನು ಸಹ ಪೂರ್ಣಕುಂಭದಲ್ಲಿ ಕನ್ನಡ ಭಾವುಟ ಹಿಡಿದು ಸಾಗಲಿ. ಇದರಿಂದ ಮಹಿಳಾ ಸಾಕ್ಷರತೆಯ ಜಾಗೃತಿಗೆ ಜಿಲ್ಲೆ ನೀಡಿರುವ ಪ್ರಮುಖ್ಯತೆ ಇಡಿ ರಾಷ್ಟ್ರಕ್ಕೆ ತಿಳಿಯಲಿ ಎಂದರು.

ಒಂದು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸುವ ನಿರೀಕ್ಷೆ

ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ‌ಸಮಿತಿ ಅಧ್ಯಕ್ಷರಾದ ಡಾ: ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ. ಬರುವ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನದ ನೊಂದಣಿಗೆ ಕೊನೆಯವರೆಗೂ ಅವಕಾಶವಿದೆ, ಆದರೆ ನೆನಪಿನ ಕಾಣಿಕೆ ನೀಡಲು ಒಂದು ಅಂತಿಮ ದಿನಾಂಕ ನಿಗದಿ ಮಾಡಿ ಆ ದಿನಾಂಕದವರೆಗೆ ನೊಂದಣಿ ಮಾಡಿಕೊಂಡವರಿಗೆ ಮಾತ್ರ ನೀಡಲಾಗುವುದು. ಈ ಬಗ್ಗೆ ನಿಖರ ಮಾಹಿತಿಯನ್ನು ನೀಡಲಾಗುವುದು. ಅದನ್ನು ಸಹ ಮಹಿಳೆಯರಿಗೆ ತಲುಪಿಸಬೇಕು ಎಂದರು.

ಮಹಿಳಾ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ ಸೀತಾಲಕ್ಷ್ಮಿ ಮಾತನಾಡಿ, ಮಹಿಳಾ ಸಮಿತಿ ಬೇರೆ ಸಮಿತಿಯೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಿ ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಈ ಹಿನ್ನಲೆಯಲ್ಲಿ ಮಹಿಳಾ ಸಮಿತಿಯ 5 ಸದಸ್ಯರನ್ನೊಳಗೊಂಡ 9 ಉಪಸಮಿತಿಗಳನ್ನು ರಚಿಸಲಾಗುವುದು ಎಂದರು.

ಆರೋಗ್ಯ, ವಸತಿ, ಸಾರಿಗೆ,ಆಹಾರ, ಆಸನ, ಸ್ವಯಂ ಸೇವಕರು, ಸಾಂಸ್ಕೃತಿಕ, ನೊಂದಣಿ ಹಾಗೂ ಸಮನ್ವಯ ಉಪಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು.

ಸಮಿತಿಯ ಸದಸ್ಯರು ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ಮಂಡಿಸಬೇಕಾದ ವಿಷಯಗಳ ಕುರಿತು ಮುಂದಿನ ಸಭೆಯಲ್ಲಿ ವಿಷಯಗಳನ್ನು ತಿಳಿಸಲಾಗುವುದು. ವಿಷಯಗಳನ್ನು ಮಾನ್ಯ ರಾಜ್ಯ ಅಧ್ಯಕ್ಷರಿಗೆ ಕಳುಹಿಸುವಂತೆ ಮನವಿ ಮಾಡಿದರು.

ಸಮಿತಿಯ ಸದಸ್ಯರು ಸಮ್ಮೇಳನಕ್ಕೆ ಕೊನೆಯ ಕ್ಷಣದಲ್ಲಿ ಸಮ್ಮೇಳನಕ್ಕೆ ಮಹಿಳೆಯರು ಆಗಮಿಸಿ ವಸತಿಯ ತೊಂದರೆಯಾದಲ್ಲಿ ತಮ್ಮ ಮನೆಯಲ್ಲೇ ಆತಿಥ್ಯ ನೀಡಲು ಸಿದ್ಧರಿದ್ದೇವೆ ಎಂದರು.

ಸಭೆಯಲ್ಲಿ ಮಹಿಳಾ ಸಮಿತಿ ಉಪಾಧ್ಯಕ್ಷರಾದ ಸೌಭಾಗ್ಯ ಮಹದೇವು, ಸಂಚಾಲಕಿ ಸಿ.ಜಿ ಸುಜಾತ ಕೃಷ್ಣ ಸದಸ್ಯರಾದ ಮಾಲತಿ, ಹೇಮಾವತಿ, ಉಷಾರಾಣಿ, ಚಂದ್ರಕಲಾ ಶಿವರಾಮ, ಸಿ.ಕುಮಾರಿ, ಡಾ.ಅನುಸೂಯ, ನೀಲಾ ಶಿವಮೂರ್ತಿ, ಸುಜಾತಮಣಿ, ಗಾಯಿತ್ರಿ, ಶೋಭಾ ವೆಂಕಟೇಶ್, ವಿನುತಾ, ಶಕುಂತಲ, ರೂಪಶ್ರೀ ಎಸ್.ಎಸ್, ಸುಜಾತ ಸಿದ್ದಯ್ಯ, ಪದ್ಮಾ ಶ್ರೀನಿವಾಸ, ಜಯಮ್ಮ, ಶ್ರೀಲತಾ ಅನಿತಾ, ವರಲಕ್ಷ್ಮಿ, ಲತಾ, ಪುಷ್ಪ, ಅನುಪಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!