ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ 75 ರ ಟೋಲ್ ನಲ್ಲಿ ಕಾರ್ಯನಿರ್ವಹಿಸುವ 80 ಕ್ಕೂ ಹೆಚ್ಚು ಜನ ನೌಕರರು ಶುಕ್ರವಾರ ರಾತ್ರಿಯಿಂದಲೇ ಟೋಲ್ ಸಂಗ್ರಹವನ್ನು ನಿಲ್ಲಿಸಿ ಕಪ್ಪುಪಟ್ಟಿ ಧರಿಸುವುದರ ಮೂಲಕ ಇ.ಜಿ.ಐ.ಎಸ್.ಸಂಸ್ಥೆ ಮತ್ತು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಪ್ರಾಜೆಕ್ಟ್ ಹೆಡ್ ಕೆ.ಕೆ.ರಾವ್ ವಿರುದ್ಧ ಧಿಕ್ಕಾರ ಕೂಗಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.
ನಾಗಮಂಗಲ ತಾಲೂಕಿನ ಬೆಳ್ಳೂರ್ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 75 ನೆಲ್ಲಿಗೆರೆ ಟೋಲ್ ನ ಕ್ಯೂಬ್ ಹೈವೆ ಪ್ರೈವೇಟ್ ಲಿಮಿಟೆಡ್ ವತಿಯಿಂದ ಟೆಂಡರ್ ಪಡೆದು ಇ.ಜಿ.ಐ.ಎಸ್.ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದಾರೆ ಇಲ್ಲಿ 80 ಕ್ಕೂ ಹೆಚ್ಚು ನೌಕರರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ನೌಕರರಿಗೆ ಇನ್ಸೂರೆನ್ಸ್ ಪಾಲಿಸಿ ಬೋನಸ್ ನೀಡದಿರುವುದು ಇನ್ನೂ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಐ.ಜಿ.ಐ.ಎಸ್ ಸಂಸ್ಥೆಯ ವಿರುದ್ಧ ಕಪ್ಪುಪಟ್ಟಿ ಧರಿಸಿ ಟೋಲ್ ನ ಪಕ್ಕದ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಟೋಲ್ ನಲ್ಲಿ ಕಾರ್ಯನಿರ್ವಹಿಸುವ ನೌಕರ ಸೂಪರ್ ವೈಜರ್ ವಿದ್ಯಾಧರ ಮಾತನಾಡಿ ಸುತ್ತಮುತ್ತಲು ಇರುವ ಗ್ರಾಮೀಣ ಪ್ರದೇಶದ ಯುವಕರು ಈ ಟೋಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇ.ಜಿ.ಐ.ಎಸ್. ಪ್ರಾಜೆಕ್ಟ್ ಕೆ ಕೆ ರಾವ್ ರವರು ನೌಕರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿದರು.
ಮತ್ತೊಬ್ಬ ನೌಕರ ರಾಮಕೃಷ್ಣೇಗೌಡ ಮಾತನಾಡಿ ಅಧಿಕಾರಿಗಳು ಮಾತ್ರ ತಮಗೆ ಎಲ್ಲಾ ರೀತಿಯ ಸೌಲತ್ತುಗಳನ್ನು ಕಂಪನಿಯ ವತಿಯಿಂದ ಪಡೆದುಕೊಳ್ಳುತ್ತಾರೆ ಅದರೆ ಪ್ರಾಮಾಣಿಕವಾಗಿ ದುಡಿಯುವ ನಮ್ಮ ನೌಕರರನ್ನು ಕಡೆಗಣಿಸುತ್ತಿದ್ದಾರೆ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ರಾಜೇಂದ್ರ ಬಾಬು. ರಕ್ಷಿತ್ ರಾಜು. ಉಮೇಶ್. ಚಂದನ್. ವಿಪ್ರೋವರ್ಧನ್. ನಂಜೇಗೌಡ ಹಾಗೂ ಟೋಲ್ ನಲ್ಲಿ 80 ಕ್ಕೂ ಜನ ಕಾರ್ಯನಿರ್ವಹಿಸುವ ನೌಕರರ ವೃಂದ ಭಾಗವಹಿಸಿದ್ದರು.