Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಮಧುರ ಲಯನ್ಸ್ ನೂತನ ಅಧ್ಯಕ್ಷರಾಗಿ ಸಿ. ತ್ಯಾಗರಾಜ್ ಪದಗ್ರಹಣ

ಮಂಡ್ಯ ಮಧುರ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹಾಗೂ ಅವರ ತಂಡದ ಪದಗ್ರಹಣ ಸಮಾರಂಭ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಮಾಜಿ ರಾಜ್ಯಪಾಲ ಲಯನ್ ಕೆ.ದೇವೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸ್ನೇಹ ಹಾಗೂ ಸೇವೆಗೆ ಸೀಮಿತವಾದದ್ದು ಲಯನ್ಸ್ ಸಂಸ್ಥೆ.ಮೊದಲು ಆರು ಜಿಲ್ಲೆಗಳು ಸೇರಿ ಒಂದು ಲಯನ್ ಸಂಸ್ಥೆಯಾಗಿತ್ತು.

13 ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆ ವಿಭಜನೆಯಾಗಿ ಅಧಿಕೃತವಾಗಿ ಸಂಸ್ಥೆ ಸ್ಥಾಪನೆಯಾಗಿದೆ.ಮಂಡ್ಯ ಮೈಸೂರು,ಚಾಮರಾಜನಗರ ಜಿಲ್ಲೆಗಳು ಸೇರಿ ಸಂಸ್ಥೆಯಾಗಿದ್ದು 2023 ರಿಂದ ಅಧಿಕಾರ ಪಡೆಯುತ್ತದೆ.

ಮೈಸೂರು ವಿಭಾಗ ಬೃಹದಾಕಾರವಾಗಿ ಬೆಳೆಯುತ್ತಿದ್ದು,ಒಳ್ಳೆಯ ವ್ಯಕ್ತಿಗಳನ್ನು ಆರಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಜಿಲ್ಲೆಯ ಲಯನ್ಸ್ ಸಂಸ್ಥೆಯ ಸದಸ್ಯರುಗಳು ಎಲ್ಲಾ ಕ್ಷೇತ್ರಗಳಲ್ಲೂ ಬೆಳೆದು ತಮ್ಮ ಛಾಪನ್ನು ಮೂಡಿಸಿದ್ದಾರೆ.ಮಧುರ ಲಯನ್ ಸಂಸ್ಥೆ 46 ಮಂದಿ ಸದಸ್ಯರನ್ನು ಹೊಂದಿದ್ದು,ಮುಂದಿನ ದಿನಗಳಲ್ಲಿ 56 ಮಂದಿ ಸದಸ್ಯರನ್ನು ಮಾಡಬೇಕೆಂದು ಹೇಳಿದರು.

ಮಂಡ್ಯ ಮಧುರ ಲಯನ್ ಸಂಸ್ಥೆಯ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಸಿ. ತ್ಯಾಗರಾಜು ಅವರು, ಮಂಡ್ಯ ಮಧುರ ಲಯನ್ ಸಂಸ್ಥೆ ಜಿಲ್ಲೆಯಲ್ಲಿ ಒಂದನೇ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎರಡು ಕಾರ್ಯಕ್ರಮಗಳನ್ನು ರೂಪಿಸಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು‌ ಎಂದು ತಿಳಿಸಿದರು.

ಬಸರಾಳು ಹೋಬಳಿಯಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಗಾರ್ಮೆಂಟ್ಸ್ ಕೆಲಸಕ್ಕಾಗಿ ಮಹಿಳೆಯರು ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಹೋಗಿ ಬರುತ್ತಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸರಾಳು ಹೋಬಳಿ ಕೇಂದ್ರದಲ್ಲಿ ಬಾಡಿಗೆ ಮನೆ ತೆರೆದು 10 ಹೊಲಿಗೆ ಯಂತ್ರಗಳನ್ನು ಇಟ್ಟು ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದ್ದೇನೆ.ಇದರಿಂದ ಮಹಿಳೆಯರು ಹೊಲಿಗೆ ತರಬೇತಿ ಪಡೆಯುವ ಮೂಲಕ ಅವರ ಬದುಕಿಗೆ ದಾರಿದೀಪವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಎ.ರಮೇಶ್, ಜಿ.ಎನ್.ಕೆಂಪರಾಜು,ಸುರೇಶ್ ರಾಮು,ಮೋಹನ್ ಕುಮಾರ್, ಎನ್ ಕೃಷ್ಣೇಗೌಡ, ಸುಬ್ರಹ್ಮಣ್ಯ,
ರಾಜಶೇಖರ್,ರಘುನಾಥ್ ನಂದೀಶ್,ಸಿದ್ದರಾಮೇಗೌಡ, ದೇವೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!