Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೈ ಬರಹದ ಆರ್ ಟಿ ಸಿ ಯನ್ನು ಕಂಪ್ಯೂಟರೀಕರಣ ಮಾಡದಿದ್ದರೆ ಪ್ರತಿಭಟನೆ

ರೈತರು ತಮ್ಮ ಭೂಮಿಗಳನ್ನು ಸಾಗುವಳಿ ಮಾಡುತ್ತಿದ್ದರು ಅವರಿಗೆ ಕೈಬರಹದ ಆರ್ ಟಿಸಿ ಗಳನ್ನು ನೀಡುತ್ತಿದ್ದಾರೆ. ಕೂಡಲೇ ಕಂಪ್ಯೂಟರೀಕರಣ ಆರ್ ಟಿಸಿ ಮಾಡಿಕೊಡದಿದ್ದರೆ ಜುಲೈ 28 ರಂದೇ ಪ್ರತಿಭಟನೆ ನಡೆಸಲಾಗುವುದು ಎಂದು ಸೂ ಸಿ ಪ್ರಕಾಶ್ ತಿಳಿಸಿದರು.

ಎರಡು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರ ಜಮೀನನ್ನು ಕೈ ಬರಹದ ಆರ್ ಟಿ ಸಿ ಮೂಲಕವೇ ಇಟ್ಟಿರುವುದರ ವಿರುದ್ಧ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು ಮದ್ದೂರು ಹಾಗು ಮಂಡ್ಯ ತಾಲ್ಲೂಕು ಗೆ ಸೇರಿದ ಹೊನ್ನಗಳ್ಳಿ ಮಠ, ಹೊನ್ನಗಳ್ಳಿಮಠ ಕಾಲೋನಿ, ಹನಕೆರೆ, ಗೆಜ್ಜಲಗೆರೆ, ಸೊಳ್ಳೆಪುರ, ವಳಗೆರೆಹಳ್ಳಿ, ಚನ್ನಂಕೇಗೌಡನದೊಡ್ಡಿ ವ್ಯಾಪ್ತಿಯ 960 ಎಕ್ಕರೆ ಜಮೀನಿನ ಮಾಲೀಕರಿಗೆ ನಿಖರ ದಾಖಲಾತಿಗಳ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.

ಸದರಿ ಜಮೀನುಗಳು ಇನಾಂ ರದ್ದತಿಕಾಯ್ದೆ 1952 ರಲ್ಲಿ ಮಂಡ್ಯ ವಿಶೇಷ ವಿಭಾಗ ಕಮಿಷನರ್ ಮೂಲಕ ಮಂಜೂರಾಗಿದ್ದವು.

1958 ರಲ್ಲಿ ಪುನರ್ ಅಳತೆ ಹೊಂದಾಣಿಕೆ ರೀ ಸರ್ವೆ ಸೆಟಲ್ ಮೆಂಟ್ ಕೂಡ ಆಗಿರುತ್ತದೆ‌. ಇದಾಗಿಯೂ 1962 ರಲ್ಲಿ ಸರ್ವೆ ವಿಭಾಗದಿಂದ ಕಂದಾಯ ಇಲಾಖೆಗೆ ಜಮೀನಿಗೆ ಆಧರಿಸಿದ ಧಾಖಲೆಗಳ ವರ್ಗಾವಣೆಯಾಗಿದೆ.

ಆದರೂ ಈ ಭಾಗದ ಎಲ್ಲಾ ರೈತರಿಗೆ ಕಂಪೂಟರೀಕರಣದ ಆರ್ ಟಿ ಸಿ ಕೊಡಲು ಜಿಲ್ಲಾಡಳಿತದ ನಿರಾಕರಣೆ ಏಕೆ ಎಂದು ಪ್ರಶ್ನಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!