Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೆಣ್ಣು ಭ್ರೂಣ ಹತ್ಯೆ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ

ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಡಿಕಾಯ್ ಕಾರ್ಯಾಚರಣೆ ಮಾಡುವ ಮೂಲಕ ಸೀಜ್ ಮಾಡಿಸಲಾಗಿದ್ದು, ಕಠಿಣ ಕಾನೂನು ಕ್ರಮ ಜರುಗಿಸಲು ಕ್ರಮವಹಿಸಲಾಗಿದೆ ಎಂದು ಡಿಎಚ್ಓ ಡಾ.ಧನಂಜಯ್ ತಿಳಿಸಿದರು.

ಹೆಣ್ಣು ಭ್ರೂಣ ಪತ್ತೆ ಹಚ್ವಿ ಹತ್ಯೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಳವಳ್ಳಿ ಪಟ್ಟಣದಲ್ಲಿರುವ ಮಳವಳ್ಳಿ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ಡಿಕಾಯ್ ಕಾರ್ಯಾಚರಣೆ ಮಾಡಲಾಗಿತ್ತು.

ಡಿಕಾಯ್ ಕಾರ್ಯಾಚರಣೆ ಭಾಗವಾಗಿ ನಮ್ಮ ತಂಡದ ಹೆಣ್ಣು ಮಗಳನ್ನು ಮಳವಳ್ಳಿ ಡಯಾಗ್ನೋಸ್ಟಿಕ್ ಸೆಂಟರ್ ಗೆ ಕಳಿಸಿ ಹೆಣ್ಣು ಭ್ರೂಣ ಪತ್ತೆ ಮಾಡುವುದನ್ನು ಖಚಿತ ಪಡಿಸಿಕೊಂಡು ನಂತರ ಸೀಜ್ ಮಾಡಿಸಲಾಗಿದೆ ಎಂದರು.

ಪ್ರಸವ ಪೂರ್ವ ಲಿಂಗಪತ್ತೆಯಲ್ಲಿ ಭಾಗಿಯಾಗಿರುವ ಮಳವಳ್ಳಿ ಡಯಾಗ್ನೋಸ್ಟಿಕ್ ಸೆಂಟರ್ ವೈದ್ಯರು, ಸಿಬ್ಬಂದಿಗಳನ್ನು ನಾವು ಬಂಧಿಸಿಲ್ಲ.ಅವರ ಮೇಲೆ ಪಿಸಿಆರ್ ದಾಖಲು ಮಾಡಿ ಅದನ್ನು ನ್ಯಾಯಾಲಯಕ್ಕೆ ದಾಖಲು ಮಾಡುತ್ತೇವೆ. ಅಲ್ಲಿ ನ್ಯಾಯಾಧೀಶರು ತನಿಖೆ ಮಾಡಿ ಕಾನೂನು ಪ್ರಕಾರ ಆದೇಶ ಮಾಡುತ್ತಾರೆ ಎಂದು ತಿಳಿಸಿದರು.

ಸಮಾಜದಲ್ಲಿ ಹೆಣ್ಣು- ಗಂಡು ಇಬ್ಬರನ್ನು ಸರಿ ಸಮಾನರಾಗಿ ನೋಡಬೇಕು. ಇಂದು ಹೆಣ್ಣು ಮಕ್ಕಳು ಹಲವು ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ನಾವು ನೋಡುತ್ತಿದ್ದೇವೆ. ಗಂಡು-ಹೆಣ್ಣು ಎಂದು ಪ್ರಸವಕ್ಕೂ ಮುಂಚೆ ಪತ್ತೆ ಮಾಡುವುದು ಕಾನೂನುಬಾಹಿರವಾಗಿದ್ದು, ಯಾರೂ ಕೂಡ ಪ್ರಸವಕ್ಕೂ ಮುನ್ನ ಭ್ರೂಣ ಪತ್ತೆ ಮಾಡಿಸಬಾರದು. ಒಂದು ವೇಳೆ ಮಾಡಿಸಿದರೆ, ಯಾರು ಇದಕ್ಕೆ ಕಾರಣವಾಗಿರುತ್ತಾರೋ ಅವರ ಮೇಲೆ ಹಾಗೂ ಪೋಷಕರ ಮೇಲೆ ದೂರು ದಾಖಲು ಮಾಡಲಾಗುವುದು.

ಒಂದು ವೇಳೆ ಪ್ರಕರಣ ಸಾಬೀತಾದರೆ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ಯಾವುದೇ ಕಾರಣಕ್ಕೂ ಹೆಣ್ಣು ಭ್ರೂಣ ಪತ್ತೆ ಮಾಡಿಸಬಾರದು ಎಂದರು.

ಇಂದು ಗಂಡು ಮತ್ತು ಹೆಣ್ಣಿನ ಅನುಪಾತದಲ್ಲಿ ಭಾರೀ ವ್ಯತ್ಯಾಸ ಕಾಣುತ್ತಿದೆ. 1000 ಗಂಡು ಮಕ್ಕಳಿಗೆ,900 ಹೆಣ್ಣು ಮಕ್ಕಳು ಇದ್ದಾರೆ. ಇದರಿಂದ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತಿದೆ.

ಸಮತೋಲನ ಕಾಪಾಡಲು ಹೆಣ್ಣು ಮತ್ತು ಗಂಡು ಇಬ್ಬರ ಸಂಖ್ಯೆಯು ಸರಿ ಸಮಾನವಾಗಿರಬೇಕು ಎಂದ ಅವರು ಹೆಣ್ಣು ಭ್ರೂಣ ಹತ್ಯೆ ಮಾಡುವುದು ಸರಿಯಲ್ಲ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!