Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಹಂಕಾರ ಭರಿತ ಸಮಾಜಕ್ಕೆ ಕಾವ್ಯವೇ ಚುಚ್ಚುಮದ್ದು

ಅಹಂಕಾರ ಭರಿತ ಸಮಾಜಕ್ಕೆ ಕಾವ್ಯವೇ ಚುಚ್ಚುದ್ದಾಗಿದ್ದು, ಪ್ರತಿ ಘಟ್ಟದಲ್ಲಿ ಕುವೆಂಪು ಅವರು ಸಮಾಜದ ಓರೆಕೋರೆಗಳಿಗೆ ಕಾವ್ಯದ ಮೂಲಕವೇ ಉತ್ತರ ನೀಡಿದ್ದಾರೆ ಎಂದು ಪಿಇಎಸ್ ಮಹಾ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಲಗೂರಿನ ಅನಿಕೇತನ ಪ್ರತಿಷ್ಠಾನ ಮತ್ತು ಮಂಡ್ಯದ ಒಡನಾಡಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಪೂರ್ಣಚಂದ್ರ ತೇಜಸ್ವಿ ನೆನಪಿಗಾಗಿ ಆಯೋಜಿಸಿದ ಅಂತರ ಜಿಲ್ಲಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಮಾತನಾಡಿದರು.

ಕಾವ್ಯ ವಾಚ್ಯಾರ್ಥಕ್ಕೆ ಸೀಮಿತವಾಗದೆ ಸೂಚ್ಯಾರ್ಥದ ಕಡೆಗೆ ಓದುಗನನ್ನು ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಇಂದಿನ ಕವಿಗಳ ಕವಿತೆಗಳು ಭರವಸೆ ಹುಟ್ಟು ಹಾಕಿವೆ ಎಂದರು.

ವಾಚ್ಯಾರ್ಥ ಓದಿದಂತೆ ಕಲೆಯ ಅಂತಿಮ ಫಲ ನೋಡುಗ ಮತ್ತು ಕೇಳುಗನನ್ನು ಮೌನ ಕ್ಷಮೆ ದೂಡುವುದೇ ಆಗಿದೆ. ಒಳ್ಳೆಯ ಸಂವಾದವೇ ಮೌನ. ಬುದ್ಧನೂ ಸಹ ಹಲವಾರು ಸಂದರ್ಭದಲ್ಲಿ ಮೌನದ ಕಡೆ ವಾಲಿದ್ದಾನೆ. ಅದೇ ಯಶಸ್ಸು ಎಂದರು.

ಹಾಗೆಯೇ ಕಾವ್ಯ ರಚನಾ, ವಾಚನ ಸಂದರ್ಭಗಳಲ್ಲಿಯೂ ಇದು ನಿರಂತರ ಪ್ರಕ್ರಿಯೆ. ಹಿಂದಕ್ಕೆ ಎಳೆಯುವವರಿಗೆ ಕುಗ್ಗದೆ ಅಲ್ಲೆ ತಡೆದು ನಿಲ್ಲುವುದು. ಆ ನಂತರ ಚಲನೆ ಹೊಂದುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಸಲಹೆ ನೀಡಿದರು. ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಶೂರ್ಪನಖಿಯನ್ನು ಚಂದ್ರನಖಿಯನ್ನಾಗಿಸಿದರು. ಅದು ಕಾವ್ಯದ ಶಕ್ತಿ. ಅದನ್ನು ಮರೆಯುವ ಹಂತಕ್ಕೆ ಸಮಾಜ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಿ.ಉಮೇಶ್ ದಡಮಹಳ್ಳಿ ಮಾತನಾಡಿ, ನಾಡಿನ ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳ ಆಯೋಜನೆಯ ಹಿನ್ನೆಲೆಯಲ್ಲಿ ಸಂಸ್ಥೆ ಪ್ರಾರಂಭಿಸಲಾಗಿದ್ದು, ಹಲವಾರು ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಹಲಗೂರು ಮತ್ತು ಮಳವಳ್ಳಿ ಗ್ರಾಮಾಂತರ ಮಟ್ಟದಲ್ಲಿ ಸೀಮಿತವಾಗಿದ್ದ ಚಟುವಟಿಕೆಗಳನ್ನು ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಲಾಗುತ್ತಿದೆ. ಈ ಹಂತಕ್ಕೆ ತಲುಪಲು ಸಹೃದಯರೇ ಕಾರಣ ಎಂದು ಸ್ಮರಿಸಿದರು. 24 ಕವಿಗಳು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಸ್.ಬಿ.ಜ್ಯೋತಿ, ಭಾರತ್ ವಿಕಾಸ್ ಪರಿಷತ್ ಮಳವಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಅಂದಾನಿಗೌಡ, ಯೋಗಗುರು ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷ ಕಾರಸವಾಡಿ ಮಹದೇವು,ಶ್ರುತಿ, ಉಪನ್ಯಾಸಕಿ ಡಾ.ಚಂದನ, ಉಪನ್ಯಾಸಕ ಡಾ.ಚಿಕ್ಕ ಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!