ದೆಹಲಿಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ದಾಗಿ ಹರಡುತ್ತಿದ್ದು ಸೋಂಕಿತರ ಸಂಖ್ಯೆಯು 24 ಗಂಟೆಳಲ್ಲಿ 366 ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕೋವಿಡ್ ಪಾಸಿಟಿವಿಟಿಯು ಶೇ.4ಕ್ಕೆ ಏರಿಕೆಯಾಗಿದೆ. ಇದು ಫೆಬ್ರವರಿ ತಿಂಗಳ ಬಳಿಕ ದೆಹಲಿಯಲ್ಲಿ ಹೆಚ್ಚಿದ ಸೋಂಕಿನ ವರದಿಯಾಗಿದೆ.
ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದ ಕೋವಿಡ್ ಪತ್ತೆಯಾದ ತರಗತಿ ಕೊಠಡಿಯನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದರು.
ಕೋವಿಡ್-19 ವೈರಸ್ ಹೊಸದಾಗಿ ರೂಪಾಂತರಿಯಾಗಿರುವ A x e ರೀತಿಯ ವೈರಸ್ ಆಗಿ ಬದಲಾಗುತ್ತಿದ್ದು, ಸರ್ಕಾರವನ್ನು ಆತಂಕವನ್ನು ಉಂಟುಮಾಡಿದೆ. ಹೀಗಾಗಿ ಆಮ್ ಆದ್ಮಿ ಪಕ್ಷವು ಅತೀ ಶೀಘ್ರದಲ್ಲೇ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಉಚಿತವಾಗಿ ಬೂಸ್ಟರ್ ಲಸಿಕೆಯನ್ನು ನೀಡುವುದಾಗಿ ತಿಳಿಸಿದೆ. ಎರಡು ಲಸಿಕೆಯನ್ನು ಪಡೆದಿರುವ 18 ವರ್ಷ ಮೇಲ್ಪಟ್ಟ ವಯಸ್ಕರು 9 ತಿಂಗಳ ನಂತರ ಬೂಸ್ಟರ್ ಲಸಿಕೆಯ ಸೌಲಭ್ಯ ಪಡೆಯಲು ಆರ್ಹರಾಗಿರುತ್ತಾರೆ.