ಸಚಿವ ಕೆ.ಎಸ್.ಈಶ್ಬರಪ್ಪ ವಿರುದ್ದ ಭ್ರಷ್ಟಾಚಾರ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ನೀಡುವ ಬಗೆಗೆ ಚಿಂತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಗದುಗಿನ ತೋಂಟದಾರ್ಯ ಮಠದಲ್ಲಿನ ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿ ಕಟ್ಟಡ ಉದ್ಘಾಟನೆ ಮಾಢಲು ಆಗಮಿಸಿದಾಗ ಮೃತ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ಬಗೆಗೆ ಚಿಂತಿಸಲಾಗುವುದು ಎಂದರು.
ಮೃತ ಸಂತೋಷ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆನ್ನುವ ಬೇಡಿಕೆಗಳು ಬರುತ್ತಿದ್ದು ಪರಿಹಾರದ ಬಗೆಗೆ ಯೋಚಿಸುವುದಾಗಿ ತಿಳಿಸಿದರು. ಈಶ್ವರಪ್ಪ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದಿರುವ ಕಾಂಗ್ರೆಸ್ ನವರಿಗೆ, ಈ ವಿಚಾರಣೆ ಮತ್ತು ಬಂಧನದ ಬಗೆಗೆ ತನಿಖಾಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಈ ಹಿಂದೆ ಡಿವೈಎಸ್‌ಪಿ ಪಿ.ಗಣಪತಿ ಅತ್ಮಹತ್ಯೆ ಕೇಸ್ ನಲ್ಲಿ ಕೆ. ಜಾರ್ಜ್ ಅವರನ್ನು ರಾಜ್ಯದ ಪೋಲೀಸ್ ಆಗಲಿ, ಸಿಬಿಐ ಆಗಲಿ ಬಂದಿಸಿರಲಿಲ್ಲ, ಕಾಂಗ್ರೆಸ್ ನವರಿಗೆ ಈಶ್ವರಪ್ಪ ಅವರ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.