Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ನಿಡಘಟ್ಟ ಗಡಿಯಲ್ಲಿ ವಾಟಾಳ್ ಸ್ವಾಗತಿಸಲು ನಿರ್ಧಾರ

ವರದಿ: ನ.ಲಿ.ಕೃಷ್ಣ

ತಮಿಳುನಾಡಿಗೆ ನೀರು ಬಿಡದಿರಲು ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನಿಂದ ಕೆ.ಆರ್.ಎಸ್ ವರೆಗೆ ಬೃಹತ್ ಬೈಕ್ ಜಾಥಾ, ಮೆರವಣಿಗೆ ಹಮ್ಮಿಕೊಂಡಿರುವ ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ಅವರನ್ನು ನಿಡಘಟ್ಟ ಗಡಿಯಲ್ಲಿ ಸ್ವಾಗತಿಸಿ ಕರೆತರಲು‌ ಪ್ರಗತಿಪರಸಂಘಟನೆಗಳ ಒಕ್ಕೂಟ ನಿರ್ಧಾರ ಕೈಗೊಂಡಿದೆ.

ರೈತ, ದಲಿತ ಹಾಗೂ ಕನ್ನಡಪರ ಸಂಘಟನೆಗಳ ಕೂಟವಾದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಇಂದು ಮದ್ದೂರು ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ವಾಟಾಳ್ ನಾಗರಾಜ್ ಅವರು ಕಾವೇರಿಯ ಉಳಿವಿಗಾಗಿ ಹಮ್ಮಿಕ್ಕೊಂಡಿರುವ ಬೆಂಗಳೂರಿನಿಂದ ಮೈಸೂರಿನವರೆಗಿನ ಬೃಹತ್ ಮೆರವಣಿಗೆ ಮದ್ದೂರು ಪ್ರವೇಶ ಮಾಡುವ  ಅವರನ್ನು ಸ್ವಾಗತಿಸಬೇಕಾದದ್ದು ನಮ್ಮೆಲ್ಲಾರ ಕರ್ತವ್ಯ ಎಂದು ಸಭೆ ನಿರ್ಣಯ ಕೈಗೊಂಡು ಬೈಕ್ ರ್‍ಯಾಲಿ ಮೂಲಕ ನಿಡಘಟ್ಟದಿಂದ ಮದ್ದೂರು ಪ್ರವಾಸಿ ಮಂದಿರ ವೃತ್ತಕ್ಕೆ ಕರೆತಂದು ವಾಟಾ ಳ್ಅವರ ನಾಡು ನುಡಿ ನೆಲ ಜಲಕ್ಕಾಗಿನ ಹೋರಾಟ ಸ್ಮರಿಸಿ ಬಿರುದು ನೀಡಿ ಅಭಿನಂದಿಸಲು ಸಭೆ ತಿರ್ಮಾನಿಸಿತು.

ಮದ್ದೂರು ಪ್ರವಾಸಿ ಮಂದಿರದಿಂದ ಮೈಸೂರಿನವರೆಗೆ ಮೆರವಣಿಗೆಯಲ್ಲಿ ಸಾಗಲು ಸಹ ತಿರ್ಮಾನ ಕೈಗೊಳ್ಳಲಾಯಿತು, ಸಭೆಯ ಅಧ್ಯಕ್ಷತೆಯನ್ನು ರೈತಸಂಘದ ಹಿರಿಯ ಮುಖಂಡ ಸೀತಾರಾಮ್ ವಹಿಸಿದ್ದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವಿ ಸಿ ಉಮಾಶಂಕರ್, ಛಲವಾದಿ ಮಹಸಭಾದ ಮಹದೇವ್, ದಲಿತ ಸಂಘರ್ಷ ಸಮಿತಿಯ ಮರಳಿಗ ಶಿವರಾಜ್, ಅಂದಾನಿ ಸೋಮನಹಳ್ಳಿ ಒಕ್ಕಲಿಗರ ಸಂಘದ ನಾರಾಯಣ್, ದೇಶಹಳ್ಳಿ ಶಿವಪ್ಪ, ಬಿ ವಿ ಶಂಕರೇಗೌಡ, ರಘು, ವೆಂಕಟೇಗೌಡ, ವಿಶ್ವಕರ್ಮ ಸಮಾಜದ ಮಹೇಶ್, ಬಸವರಾಜ್, ಕುಮಾರ್, ಸುಮುಖ ಟ್ರಸ್ಟ್ ಕುಮಾರ್, ಗ್ರಾ ಪಂ ಸದಸ್ಯರ ಒಕ್ಕೂಟದ ದಯಾನಂದ್, ನಳಿನಾ, ಗೊರವನಹಳ್ಳಿ ಪ್ರಸನ್ನ, ಮಹೇಶ್, ಅವಿನಾಶ್, ಮನೋಹರ್, ಚಲವರಾಜ್, ಜಗ್ಗಿ, ಶ್ರೀನಿವಾಸ್, ಸೊ ಶಿ ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಕೊತ್ತನಹಳ್ಳಿ ಉಮೇಶ್, ದೊಡ್ಡಿ ರಾಮಲಿಂಗೇಗೌಡ, ರಘು, ವೆಂಕಟೇಗೌಡ ಉಪ್ಪಿನಕೆರೆ ಶಿವರಾಮ್ ಮತ್ತಿತರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!