Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನತೆಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಕ್ಕೆ ಸಿಐಟಿಯು ಮನವಿ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯ ಅಧ್ಯಕ್ಷರಾದ ಜಯಶ್ರೀ ಯವರು ಮಳವಳ್ಳಿಯಲ್ಲಿ ನಡೆದ ಅಪ್ರಾಪ್ತ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಕೊಲೆಯಾದ ಮಗುವಿನ ಕುಟುಂಬಕ್ಕೆ ಭೇಟಿಯಾದ ನಂತರ ಜಿಲ್ಲಾ ಪಂಚಾಯತ್ ಗೆ ಬಂದ ಸಂದರ್ಭದಲ್ಲಿ ಸಿಐಟಿಯು ಮಂಡ್ಯ ಜಿಲ್ಲಾ ಸಮಿತಿಯು ಭೇಟಿ ಮಾಡಿ ಜನತೆಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಕ್ಕೆ ಆಯೋಜಿಸಬೇಕೆಂದು ಸಿಐಟಿಯು ಮನವಿ ಮಾಡಿತು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ,ಮಕ್ಕಳ ಸಾಗಾಣಿಕೆ, ಮಾರಾಟ, ಬಾಲ್ಯವಿವಾಹ ಹೆಚ್ಚುತ್ತಿದೆ. ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ನ್ಯಾಯ ಸಮಿತಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ವಿಶೇಷ ಘಟಕ, ಸದಾ ನಿಗಾವಹಿಸಿ ಕೆಲಸ ನಿರ್ವಹಿಸಬೇಕು ಮತ್ತು ಶಾಲಾ, ಕಾಲೇಜು ಮತ್ತು ಜನತೆಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕೆಂದು ಮಕ್ಕಳ ರಕ್ಷಣಾ ಆಯೋಗದ ರಾಜ್ಯ ಅಧ್ಯಕ್ಷರಾದ ಜಯಶ್ರೀ ಯವರಿಗೆ ಸಿಐಟಿಯು ಮಂಡ್ಯಜಿಲ್ಲಾ ಸಮಿತಿಯು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಂತ ಎಸ್. ಹುಲ್ಮ್ ನಿ ರವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ನಾಗರಾಜು ಉಪ ನಿರ್ದೇಶಕರು ಮಹಿಳೆ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಂಡ್ಯ.ಎಂ.ಎಂ.ಶಿವಕುಮಾರ್ ಅಧ್ಯಕ್ಷರು, ಸಿಐಟಿಯು ಮಂಡ್ಯ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಶಶಿಕಲಾ ಎ.ಬಿ. ಕಾರ್ಯದರ್ಶಿ ಸಿಐಟಿಯು, ಎಸ್ಎಫ್ಐನ ರುದ್ರೇಶ್ ಮೌರ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!