Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತರ ಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ| ಸಹೋದರಿಯ ಮೃತದೇಹ ಹೊತ್ತು 5 ಕಿ.ಮೀ. ನಡೆದ ಯುವಕ !

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿನ ಹೃದಯವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರವಾಹ ಪೀಡಿತ ಕುಟುಂಬದ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ದೇಶದ ಜನರ ಹೃದಯ ಕಲಕುವಂತೆ ಮಾಡಿದೆ.

ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಲಖಿಂಪುರ ಖೇರಿ ಪ್ರದೇಶದ ನೂರಾರು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ಹಳ್ಳಿಗಳು ಜಲಾವೃತವಾಗಿವೆ. ರಸ್ತೆಗಳು ಬಂದ್‌ ಆಗಿವೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ, ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ 12ನೇ ತರಗತಿ ಓದುತ್ತಿದ್ದ ಬಾಲಕಿ ಶಿವಾನಿಯನ್ನು ಹೇಗೋ ಹರಸಾಹಸಪಟ್ಟು ಆಕೆಯ ಸಹೋದರ ಮನೋಜ್ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ, ಆಕೆಗೆ ಚಿಕಿತ್ಸೆ ಫಲಿಸದೆ, ಬಾಲಕಿ ಸಾವನ್ನಪ್ಪಿದ್ದಾರೆ.

“>

 

ಪ್ರವಾಹದಿಂದಾಗಿ ತಂಗಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾದ ಮನೋಜ್ ತನ್ನ ತಂಗಿಯ ಮೃತದೇಹವನ್ನು ಮರಳಿ ಮನೆಗೆ ಕರೆತರಲು ಆ್ಯಂಬುಲೆನ್ಸ್‌ ಕೂಡ ಸಿಗದ ಪರಿಣಾಮ, ಹೆಗಲ ಮೇಲೆ ಹೊತ್ತಿಕೊಂಡು ಹೋಗಿದ್ದಾರೆ. ಮನೋಜ್ ತನ್ನ ತಂಗಿಯ ಮೃತದೇಹ ಹೊತ್ತು ವೇಗವಾಗಿ ನಡೆಯುತ್ತಿರುವ ವಿಡಿಯೋದಲ್ಲಿ ಕಂಡುಬಂದಿದೆ.

ಪಾಲಿಯಾ ನಗರದಲ್ಲಿ ಶಿವಾನಿಯನ್ನು ಪರೀಕ್ಷಿಸಿದ ವೈದ್ಯರು, ಆಕೆ ಟೈಫಾಯಿಡ್ ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಔಷಧಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಶಿವಾನಿಯ ಆರೋಗ್ಯ ಸ್ಥಿತಿ ಹದಗೆಡತೊಡಗಿತು. ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಆದರೆ, ಪಾಲಿಯಾ ನಗರವು ಪ್ರವಾಹಕ್ಕೆ ಸಿಲುಕಿ, ಜಲಾವೃತಗೊಂಡಿದೆ. ನಗರದ ಹಲವಾರು ರಸ್ತೆಗಳು ಬಂದ್ ಆಗಿವೆ. ಶಾರದಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಲಖಿಂಪುರ ಜಿಲ್ಲಾಸ್ಪತ್ರೆಗೆ ತೆರಳಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ, ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ, ಶಿವಾನಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಂದೆ ದೇವೇಂದ್ರ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!