Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಸ್ ಎಸ್ ಎಲ್ ಸಿ : ಸಾಧನೆಗೈದ ವಿದ್ಯಾರ್ಥಿಗಳು

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯ ಏಳು ಮಂದಿ ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಏಳು ಮಂದಿ ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳು ಕೆ.ಆರ್.ಪೇಟೆ ತಾಲ್ಲೂಕಿನವರಾಗಿರುವುದು ವಿಶೇಷ. ಇಬ್ಬರು ಮದ್ದೂರು, ಮಂಡ್ಯ ದಕ್ಷಿಣ ಹಾಗೂ ನಾಗಮಂಗಲ ತಾಲೂಕಿನ ತಲಾ ಒಬ್ಬರು ದ್ವಿತೀಯ ಸ್ಥಾನ ಪಡೆದರಾಗಿದ್ದಾರೆ.

ಕೆ.ಆರ್.ಪೇಟೆಯ ತೇಗನಹಳ್ಳಿ ಗೇಟ್ ನಲ್ಲಿರುವ ಆಶೀರ್ವಾದ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಾದ  ಬಿ.ಎಸ್.ಮೊನಾಲಿಸಾ,ಎಂ.ಪಿ.ಸಹನ ಹಾಗೂ ಕೆ.ಆರ್.ಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಹರ್ಷಿತಾ 625 ಅಂಕಗಳಿಗೆ 624 ಅಂಕ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಹಾಗೆಯೇ ಮದ್ದೂರು ತಾಲ್ಲೂಕಿನ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮದ್ದೂರಿನ ಸೆಂಟ್ ಅ್ಯನ್ಸ್ ಹೈಸ್ಕೂಲ್ ವಿದ್ಯಾರ್ಥಿ ಬಿ.ಎಸ್. ನಿರೂಪ್ ಹಾಗೂ ಮದ್ದೂರಿನ ಹರಳಹಳ್ಳಿ ಗ್ರಾಮದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಎನ್.ದರ್ಶಿನಿ ಹಾಗೂ ಮಂಡ್ಯ ದಕ್ಷಿಣದ ಸದ್ವಿದ್ಯ ಹೈ ಸ್ಕೂಲ್ ವಿದ್ಯಾರ್ಥಿ ಲೇಖನ ಕೆ.ಗೌಡ ಹಾಗೂ ನಾಗಮಂಗಲ ತಾಲೂಕಿನ ವಿಸ್ಡಮಂ ಪಬ್ಲಿಕ್ ಶಾಲೆಯ ತನೀಶಾ ದ್ವಿತೀಯ ಸ್ಥಾನ ಪಡೆದ ಶಾಲೆಗೆ ಹಾಗೂ ಪೋಷಕರಿಗೆ ಹೆಸರು ತಂದಿದ್ದಾರೆ.

ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಡಿಡಿಪಿಐ ಎಸ್.ಟಿ. ಜವರೇಗೌಡ ಅಭಿ ನಂದಿಸಿ ಶುಭ ಕೋರಿದ್ದಾರೆ.ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!