ಮಂಡ್ಯ ಜಿಲ್ಲೆಯಾದ್ಯಂತ ರಾಜಕೀಯ ಪ್ರಚಾರಾಂದೋಲನವನ್ನು ಸಿಪಿಐ (ಎಂ) ಪಕ್ಷವು ಹಮ್ಮಿಕೊಂಡಿದೆ.
ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳು ಹಾಗೂ ಮಂಡ್ಯದ ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲು ಒತ್ತಾಯಿಸಿ ಈ ಆದೋಂಲನವನ್ನು ಹಮ್ಮಿಕೊಂಡಿದೆ.
ಕೇಂದ್ರದ ಮೋದಿ ಸರ್ಕಾರ, ರಾಜ್ಯದ ಬೊಮ್ಮಾಯಿ ಸರ್ಕಾರ ಎರಡೂ ಬಿಜೆಪಿ ಸಕಾರಗಳು ರೈತರು, ಕಾರ್ಮಿಕರು ಹಾಗೂ ಇತರೆ ದುಡಿಯುವ ಜನವರ್ಗಗಳ ವಿರುದ್ಧ ಯುದ್ಧ ಸಾರಿವೆ. ಶ್ರೀಮಂತರು, ಕಾರ್ಫೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಸರ್ಕಾರವನ್ನು ನಡೆಸುತ್ತಿವೆ.
ದುಡಿಯುವ ಜನತೆ ತಮ್ಮ ಸಮಸ್ಯೆಗಳ ವಿರುದ್ಧ ಒಂದಾಗುವಂತೆ, ಹೋರಾಡದಂತೆ ಅವರನ್ನು ಧರ್ಮದ ಆಧಾರದಲ್ಲಿ, ಜಾತಿಯ ಆಧಾರದಲ್ಲಿ ವಿಭಜಿಸಲಾಗುತ್ತಿದೆ. ಕೋಮು ಗಲಭೆಗಳು, ಹಿಂಸಾಚಾರ, ದೌರ್ಜನ್ಯಗಳು ಮೀತಿ ಮೀರಿ ಜನರ ಬದುಕು ಅಸಹನೀಯಗೊಂಡಿದೆ.
ಈ ನೀತಿಗಳು ಮತ್ತು ಅವುಗಳನ್ನು ತರುತ್ತಿರುವ ಸರ್ಕಾಗಳನ್ನು ಸೋಲಿಸದಿದ್ದರೆ ಜನರ ಬದುಕಿಗೆ ರಕ್ಷಣೆಯಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್Fವಾದಿ)- ಸಿಪಿಐ (ಎಂ) ಮಂಡ್ಯ ಜಿಲ್ಲಾ ಸಮಿತಿಯು ಜಿಲ್ಲೆಯಾದ್ಯಂತ ಪ್ರಚಾರಾಂದೋಲನಕ್ಕೆ ಕರೆ ನೀಡಿದೆ.
ಬೆಲೆ ಏರಿಕೆ, ಭ್ರಷ್ಟಾಚಾರ, ರಾಜ್ಯವನ್ನು ನಾಶ ಮಾಡುತ್ತಿರುವ ಕೋಮುವಾದ, ಕುಸಿಯುತ್ತಿರುವ ಆರ್ಥಿಕತೆ ಮತ್ತು ಆಡಳಿತ, ಕೃಷಿ ಕಾಯ್ದೆಗಳು, ಕಾರ್ಮಿಕ ಸಂಹಿತೆಗಳು, ಎನ್ಇಪಿ ( ಹೊಸ ಶಿಕ್ಷಣ ನೀತಿ ಜಾರಿ ), ಹೆಚ್ದುತ್ತಿರುವ ನಿರುದ್ಯೋಗ ಈ ಎಲ್ಲಾ ವಿಚಾರಗಳ ಬಗೆಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಮೇ 7 ರಿಂದ 14ರವರೆಗೆ ಪ್ರಚಾರಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಿಪಿಐ (ಎಂ) ಪಕ್ಷದ ಸಿ. ಕುಮಾರಿಯವರು ತಿಳಿಸಿದ್ದಾರೆ.