Friday, September 20, 2024

ಪ್ರಾಯೋಗಿಕ ಆವೃತ್ತಿ

ಸಾವಿನಂಚಿನಲ್ಲೂ ಕಾವೇರಿಗಾಗಿ ಮಿಡಿದ ನಟಿ ಲೀಲಾವತಿ: ಸುನಂದ ಜಯರಾಂ ಕಂಬನಿ

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದೆ ಹಿರಿಯ ನಟಿ ಲೀಲಾವತಿ ಅವರ ನಿಧನ ಭಾರಿ ಬೇಸರ ತಂದಿದೆ, ಆವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ಕೊನೆಯ ದಿನಗಳಲ್ಲಿಯೂ ಜನಪರವಾಗಿದ್ದು, ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪರವಾಗಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಕಂಬನಿ ಮಿಡಿದಿದ್ದಾರೆ.

nudikarnataka.com

ಅಪ್ರತಿಮ ಕಲಾವಿದೆ ಲೀಲಾವತಿ ಅವರು, ಮಂಡ್ಯ ನೆಲದಲ್ಲಿ ನಡೆಯುತ್ತಿರುವ ಕಾವೇರಿ ಚಳಿವಳಿಯ ಧರಣಿ ಸ್ಥಳಕ್ಕೆ ಕುಟುಂಬ ಸಮೇತ ಬಂದು ಬೆಂಬಲ ನೀಡಿದ್ದರು, ಮುಪ್ಪಿನಲ್ಲೂ ಅವರಲ್ಲಿದ್ದ ಉತ್ಸಾಹ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿತ್ತು. ಲೀಲಾವತಿ ಅವರು ತಮ್ಮ ಕೊನೆಯ ದಿನಗಳವರೆಗೂ ಕೂಡ ಅನಾರೋಗ್ಯದ ನಡುವೆಯೂ ಸಮಾಜದ ನಡುವೆ ಬೆರೆತು, ಸಮಾಜಮುಖಿಯಾಗಿ ಸ್ಪಂದಿಸುತ್ತಿದ್ದರು, ಈ ಗುಣ ಅವರ ದೊಡ್ಡತನವನ್ನು ಜವಬ್ದಾರಿಯುತ ಮನಸ್ಸನ್ನು ನಮಗೆ ಎತ್ತಿತೋರಿಸುತ್ತದೆ ಎಂದು ಹೇಳಿದ್ದಾರೆ.

ನಾವು ಕಾವೇರಿ ನೀರಿನ ವಿಷಯವಾಗಿ ಚಳವಳಿ ಮಾಡುವಾಗ ಅವರು ನಡೆಯಲು ಸಾಧ್ಯವಿಲ್ಲದಿದ್ದರೂ ಧರಣಿ ಸ್ಥಳಕ್ಕೆ ಬಂದು ಗೌರವ ನೀಡಿ, ಹೋರಾಟಕ್ಕೆ ಮತ್ತಷ್ಟು ಸ್ಪೂರ್ತಿ, ಶಕ್ತಿ ನೀಡಿ ಮಾತನಾಡಿದ್ದು ಮರೆಯಲಾಗದು ಎಂದು ಸ್ಮರಿಸಿದ್ದಾರೆ.

ಹಿರಿಯ ಚೇತನ ನಮ್ಮನ್ನು ಅಗಲಿರುವುದು ದು:ಖಕರ, ದೇವರು ಅವರ ಕುಟುಂಬಕ್ಕೆ ದು:ಖಭರಿಸುವ ಶಕ್ತಿಯನ್ನು ನೀಡಿಲಿ, ಅವರ ಅಭಿಮಾನಿಗಳು ಸಾಂತ್ವನಗೊಳ್ಳಲಿ, ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮತ್ತು ಪ್ರಗತಿಪರ ಹೋರಾಟಗಾರ ಪರವಾಗಿ ಸಂತಾಪ ಸೂಚಿಸುತ್ತೇವೆ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!