Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರೌಢ ವಯಸ್ಕರೇ ವ್ಯಸನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ- ಡಾ.ಕುಮಾರ್

ಪ್ರೌಢ ವಯಸ್ಸಿನವರು ವ್ಯಸನಗಳ ಪ್ರಯೋಗಕ್ಕೆ ಮುಂದಾಗಿ ವ್ಯಸನಿಗಳಾಗುವುದು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಡಿಎಸ್‌ಓ ಡಾ.ಕುಮಾರ್ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ನಗರದ ಸರ್ಕಾರಿ ಪ್ರೌಢಶಾಲೆ (ಮಾಜಿ ಪುರಸಭೆ)ಯಲ್ಲಿ ರೋಟರಿ ಸಂಸ್ಥೆ, ನೆಹರು ಯುವ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅನನ್ಯ ಹಾರ್ಟ್ ಸಂಸ್ಥೆ ವತಿಯಿಂದ ನಡೆದ ರಾಷ್ಟ್ರೀಯ ವ್ಯಸನ ಮುಕ್ತ ದಿನಾಚರಣೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು

ಪ್ರಸ್ತುತ ಪ್ರೌಢವಯಸ್ಸಿನ ಮನಸ್ಸುಗಳು ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಬಗ್ಗೆ  ಕುತೂಹಲಭರಿತವಾಗಿರುತ್ತಾರೆ, ವ್ಯಸನಗಳಿಂದ ಆಗುವ ಪರಿಣಾಮಗಳು ಅರಿವು ಇರುವುದಿಲ್ಲ, ಬದಲಾಗುವ ಹಾರ್ಮೋನ್‌ಗಳ ಸೆಳೆತಕ್ಕೆ ವ್ಯಸನಿಗಳಾಗುವುದು ಕಂಡು ಬರುತ್ತಿವೆ ಎಂದರು.

ಡಿಡಿಪಿಯು ಉಮೇಶ್ ಮಾತನಾಡಿ, ವ್ಯಸನಿಗಳಿಗೆ ಯಾವುದೇ ಅವಕಾಶ ಸಿಗಲ್ಲ, ಆಗ ದಾರಿ ತಪ್ಪುತ್ತಾರೆ, ವಿದೇಶಗಳಲ್ಲಿ ಕಡಿಮೆ ವ್ಯಸನಿಗಳನ್ನು ಕಾಣಬಹುದು, ಆದರೆ ಭಾರತದಲ್ಲಿ ಅತಿಯಾಗಿ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮಕ್ಕಳ ಪೋಷಕರು ಎಚ್ಚರವಸಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷೆ ಅನುಪಮಾ, ಕೆ.ಎಸ್.ಓ.ಯು ಪ್ರಾದೇಶಿಕ ನಿರ್ದೇಶಕಿ ಮಿಲನ್, ಮಾನಸಿಕ ಆಪ್ತ ಸಮಾಲೋಚಕ ಸುಹೇಲ್, ರೋಟರಿ ಸಂಸ್ಥೆ ಕಾರ್ಯದರ್ಶಿ ರಾಜೇಶ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನ್, ಪಿಡಿಎಫ್ ಲಯನ್ಸ್ ಸಂಸ್ಥೆ ಅಧ್ಯಕ್ಷ ಅನಂತ, ಸಮಾಜ ಕಾರ್ಯಕರ್ತ ಮೋಹನ್‌ಕುಮಾರ್, ಶಿಕ್ಷಕಿ ಲಕ್ಷ್ಮಿ ಮತ್ತು ಶಿಕ್ಷಕವೃಂದ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!